ಪ್ರತ್ಯೇಕ ಘಟನೆ; Nagara Panchami ಯಂದೆ ದುರಂತ, ಹಾವು ಕಡಿದು ವಾಟರ್ಮ್ಯಾನ್, ಮಹಿಳೆ ಸಾವು!

ನಾಗರ ಪಂಚಮಿ ಹಬ್ಬದ ದಿನವೇ ಹಾವು ಕಡಿತದಿಂದ ಇಬ್ಬರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ಬೀದರ್ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಸೋಲದಾಬಕಾ ಗ್ರಾಮದಲ್ಲಿ ನೀರಿನ ಟ್ಯಾಂಕ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಟರ್ಮ್ಯಾನ್ ಹಾವು ಕಡಿತದಿಂದ ಮೃತಪಟ್ಟಿದ್ದಾರೆ.
ಹಾಗೆಯೇ, ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಸತ್ಯವ್ವ ಶಿಂಗೆ (43) ಎಂಬ ಮಹಿಳೆ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ.
READ THIS : ಬರೀ ಟಿಕೆಟ್ ಸಂಗ್ರಹದಿಂದಲೇ ದಾಖಲೆ ಬರೆದ ಚಾಮುಂಡೇಶ್ವರಿ ದೇಗುಲ!

ನೀರಿನ ಟ್ಯಾಂಕ್ ಬಳಿ ಹಾವು ಕಡಿತ
ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಸೋಲದಾಬಕಾ ಗ್ರಾಮದಲ್ಲಿ 48 ವರ್ಷದ ಭೀಮ ಜಾಧವ್ ಎಂಬುವವರು ಹಾವು ಕಡಿತದಿಂದ ಮೃತಪಟ್ಟಿದ್ದಾರೆ.
ನೀರಿನ ಟ್ಯಾಂಕ್ ಬಳಿ ನೀರು ಬಂದ್ ಮಾಡಲು ತೆರಳಿದ್ದ ವೇಳೆ ಹಾವು ಕಚ್ಚಿದ್ದು, ಪರಿಣಾಮ ಭೀಮ ಜಾಧವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೀರಿನ ಟ್ಯಾಂಕ್ ಸುತ್ತಮುತ್ತ ಹುಲ್ಲು-ಕಡ್ಡಿಗಳು ಬೆಳೆದಿದ್ದೇ ಅವಘಡಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಟ್ಯಾಂಕ್ ಸುತ್ತಮುತ್ತ ಬೆಳೆದಿರುವ ಹುಲ್ಲು ಕಟಾವು ಮಾಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ವಿಷಯ ತಿಳಿದು ಹುಲಸೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಾವು ಕಚ್ಚಿದಂತೆ ಕನಸು ಕಂಡಿದ್ದ ಮಹಿಳೆ ಸಾವು
ಮತ್ತೊಂದೆಡೆ, ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ಅಂಬೇಡ್ಕರ್ ನಗರದಲ್ಲಿ 43 ವರ್ಷದ ಸತ್ಯವ್ವ ಶಿವಾನಂದ ಶಿಂಗೆ ಎಂಬ ಮಹಿಳೆ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ.
ಸತ್ಯವ್ವ ಅವರಿಗೆ ನಾಗರ ಪಂಚಮಿಯ ಇಂದಿನ ದಿನವೇ ಹಾವು ಕಚ್ಚಿದಂತೆ ಕನಸು ಬಂದಿತ್ತಂತೆ. ಇದನ್ನು ಕೂಲಿ ಕೆಲಸಕ್ಕೆ ಹೋದಾಗ ತಮ್ಮ ಸಹಪಾಠಿಗಳೊಂದಿಗೆ ಮಹಿಳೆ ಹಂಚಿಕೊಂಡಿದ್ದರಂತೆ. ಆದರೆ ಇದಾದ ಮರುದಿನವೇ ಹಾವು ಕಚ್ಚಿಯೇ ಮಹಿಳೆ ಸತ್ಯವ್ವ ಸಾವನ್ನಪ್ಪಿದ್ದಾರೆ.
ಹಾವು ಕಚ್ಚಿದಂತೆ ಕನಸು ಕಂಡಿದ್ದ ಮಹಿಳೆ ಮರುದಿನವೇ ಹಾವು ಕಡಿತಕ್ಕೆ ಬಲಿಯಾಗಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇನ್ನು ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

MUST WATCH : ಸದನದಲ್ಲೂ ENCOUNTER ಗದ್ದಲ – ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ




