ನಿವೃತ್ತಿ ಘೋಷಿಸಿರುವ Ajinkya Rahane ಸಿಗಲಿರುವ ಪಿಂಚಣಿ ಮೊತ್ತ ಎಷ್ಟು ಗೊತ್ತಾ?

ಟೀಂ ಇಂಡಿಯಾದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕವೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯಿಂದ ಪ್ರತಿ ತಿಂಗಳು ಪಿಂಚಣಿ ಪಡೆಯಲಿದ್ದಾರೆ.
ಪಿಂಚಣಿ ಯೋಜನೆಯಲ್ಲಿ ಪರಿಷ್ಕರಣೆ
ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅವಧಿಯಲ್ಲಿ (2022) ಮಾಜಿ ಕ್ರಿಕೆಟಿಗರ ಪಿಂಚಣಿ ಯೋಜನೆಯಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಅದರಂತೆ, ಭಾರತ ಪರ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರರಿಗೆ ನೀಡುವ ಪಿಂಚಣಿ ಮೊತ್ತವನ್ನು ಹೆಚ್ಚಿಸಲಾಗಿತ್ತು.
ಇದನ್ನು ಓದಿ : Bappanadu Durgaparameshwari ದೇಗುಲಕ್ಕೆ Ajinkya Rahane ಭೇಟಿ

ಮಾಜಿ ಆಟಗಾರರಿಗೆ ತಿಂಗಳಿಗೆ ₹50 ಸಾವಿರ ಪಿಂಚಣಿ
ಅಜಿಂಕ್ಯ ರಹಾನೆ ಅವರು ಭಾರತ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಬಿಸಿಸಿಐನ ಉನ್ನತ ಶ್ರೇಣಿಯ ಪಿಂಚಣಿ ವಿಭಾಗಕ್ಕೆ ಅರ್ಹರಾಗಿದ್ದಾರೆ. ಈ ಹಿಂದೆ 75ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಮಾಜಿ ಆಟಗಾರರಿಗೆ ತಿಂಗಳಿಗೆ ₹50 ಸಾವಿರ ಪಿಂಚಣಿ ನೀಡಲಾಗುತ್ತಿತ್ತು.
Ajinkya Rahane ಸಿಗಲಿರುವ ಪಿಂಚಣಿ ಮೊತ್ತ ಎಷ್ಟು?
ಆದರೆ, 2022ರ ಪರಿಷ್ಕರಣೆಯ ಬಳಿಕ ಈ ಮೊತ್ತವನ್ನು ತಿಂಗಳಿಗೆ ₹70 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ, ರಹಾನೆ ಅವರು ನಿವೃತ್ತಿಯ ನಂತರ ಬಿಸಿಸಿಐನಿಂದ ಪ್ರತಿ ತಿಂಗಳು ₹70,000 ನಿಗದಿತ ಪಿಂಚಣಿ ಪಡೆಯಲಿದ್ದಾರೆ.

ರಹಾನೆ ಅವರು ಭಾರತ ತಂಡದ ಪ್ರಮುಖ ಆಟಗಾರರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, 2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾಯಕತ್ವ ವಹಿಸಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನು ನೋಡಿ : ಗ್ರಾ.ಪಂ ಚುನಾವಣೆಗೆ ಮೀಸಲು ಪಟ್ಟಿ ಪ್ರಕಟ – ಮೀಸಲು ಪಟ್ಟಿ ಮರು ಪರಿಶೀಲನೆಗೆ ಒತ್ತಾಯ





