ನಟಿ ರುಕ್ಮಿಣಿ ವಸಂತ್ AI ಫೋಟೋ ವಿವಾದ – ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದವರ ಪತ್ತೆಗೆ ಕ್ರಮ

ಸೋಷಿಯಲ್ ಮೀಡಿಯಾದಲ್ಲಿ ನಟಿ ರುಕ್ಮಿಣಿ ವಸಂತ ಅವರ ಹೆಸರಿನಲ್ಲಿ AI ಮೂಲಕ ಸೃಷ್ಟಿಸಿದ್ದ ಅಶ್ಲೀಲ ಫೋಟೊಗಳನ್ನು ಪೋಸ್ಟ್ ಮಾಡಿದ ಪ್ರಕರಣದ ಕುರಿತು ಸೈಬರ್ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

ಅಶ್ಲೀಲ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದವ್ರ ಪತ್ತೆಗೆ ಕ್ರಮ
ನಟಿ ರುಕ್ಮಿಣಿ ವಸಂತ ಅವರು ನೀಡಿದ ದೂರಿನನ್ವಯ ಸಿಸಿಬಿ ಸೈಬರ್ ಪೊಲೀಸರು ಸಕ್ರಿಯರಾಗಿದ್ದು, ಅಶ್ಲೀಲ ಮತ್ತು ಮಾರ್ಫ್ ಮಾಡಿದ ಚಿತ್ರಗಳನ್ನು ಹಂಚಿದ ಐಡಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.ಈ ಸಂಬಂಧ ಸೈಬರ್ ಪೊಲೀಸರು ವಿವಿಧ ಸಾಮಾಜಿಕ ಜಾಲತಾಣ ಸೇವಾ ಒದಗಿಸುವ ಕಂಪನಿಗಳಿಗೆ ಪತ್ರ ಬರೆದು, ಆ ಪೋಸ್ಟ್ಗಳನ್ನು ಹಂಚಿದ ಖಾತೆಗಳ ವಿವರಗಳನ್ನು ನೀಡುವಂತೆ ಕೋರಿದ್ದಾರೆ.
ಇದನ್ನು ಓದಿ : ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ನಕಲಿ ಕರೆ — ಸೈಬರ್ ಕಳ್ಳರ ಕಾಟ..!

ಹತ್ತಾರು ಐಡಿಗಳ ಮೂಲಕ ಪೋಸ್ಟ್
ಪ್ರಾಥಮಿಕ ತನಿಖೆಯಲ್ಲಿ ಹತ್ತಾರು ಐಡಿಗಳ ಮೂಲಕ ಈ ರೀತಿಯ ಪೋಸ್ಟ್ಗಳು ಹರಡಿರುವುದು ಗಮನಕ್ಕೆ ಬಂದಿದ್ದು, ಅವುಗಳ ಮೂಲವನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಹೊರ ರಾಜ್ಯಗಳಿಂದಲೂ ಈ ರೀತಿಯ ಎಐ ಆಧಾರಿತ ಚಿತ್ರಗಳನ್ನು ವೈರಲ್ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಆರೋಪಿಗಳ ಬಂಧನಕ್ಕೆ ಬಲೆ ಬೀಸಿರೋ ಪೊಲೀಸರು
ಸೈಬರ್ ಅಪರಾಧ ಜಾಲದ ಭಾಗವಾಗಿರಬಹುದು ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.ಈ ಹಿಂದೆ ಇತರೆ ನಟಿಯರಿಗೂ ಇಂತಹ ಅಶ್ಲೀಲ ಕಮೆಂಟ್ ಹಾಗೂ ಮಾರ್ಫಿಂಗ್ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಂಡಿದ್ದ ಪೊಲೀಸರು,ಈ ಪ್ರಕರಣದಲ್ಲಿಯೂ ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆರೋಪಿಗಳ ಗುರುತು ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಇದನ್ನು ನೋಡಿ : PARAM ವಿರುದ್ಧ ತಿರುಗಿಬೀಳ್ತಾರಾ ತುಮಕೂರಿನ ಜನರು? – HEMAVATHI ಕಾಮಗಾರಿಗೆ PARAM ವಿರೋಧ ಇಲ್ವಾ?




