Bidar ನ ಜನಸೇವಾ ಖಾಸಗಿ ಶಾಲೆಯಲ್ಲಿ 15 ವರ್ಷದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಮೀರ್ ಶಾಲಾ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾನೆ.

Bidar ನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಖಾಸಗಿ ಶಾಲೆಯ ಕಟ್ಟಡದಿಂದ ಬಿದ್ದು 15 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ಶಾಂತಿನಗರ ನಿವಾಸಿ ಸಮೀರ್ ಎಂದು ಗುರುತಿಸಲಾಗಿದ್ದು, ಆತ ನಗರದ ಎಲ್ಐಸಿ ಕಾಲೋನಿಯ ಜನಸೇವಾ ಖಾಸಗಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಘಟನೆಯ ಬಳಿಕ ಬಾಲಕನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದು, ಶಾಲಾ ಸಿಬ್ಬಂದಿಯ ಕಿರುಕುಳದಿಂದಲೇ ತಮ್ಮ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ದೂರಿದ್ದಾರೆ. ಅಲ್ಲದೆ, ಶಾಲೆಯಲ್ಲಿ ತನಗೆ ಕಿರುಕುಳ ನೀಡುತ್ತಿರುವ ಬಗ್ಗೆ ಸಮೀರ್ ಈ ಹಿಂದೆ ಮನೆಯವರ ಬಳಿ ಹೇಳಿಕೊಂಡಿದ್ದ ಎಂದು ಆರೋಪಿಸಿದ್ದಾರೆ.
MUST READ : Gold & Silver Rate : 10 ಜೂನ್ 2026 ಚಿನ್ನದ ಬೆಲೆ ಭಾರೀ ಇಳಿಕೆ..!
ಇದರ ಜೊತೆಗೆ, ಕುಟುಂಬದ ಅನುಮತಿ ಪಡೆಯದೇ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲಾಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆದರೆ, ಬಾಲಕನ ಕುಟುಂಬಸ್ಥರ ಆರೋಪಗಳನ್ನು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ವಿದ್ಯಾರ್ಥಿಗೆ ಕೇವಲ ಓದಿನ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಿದ್ದೇವೆ ಹೊರತು ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎಂದು ಶಾಲಾ ಆಡಳಿತ ಸ್ಪಷ್ಟನೆ ನೀಡಿದೆ.
MUST WATCH : ಸರ್ಕಾರಿ ಶಾಲೆ ಮುಚ್ಚೋಕೆ ಪ್ಲಾನ್ ಬಿಇಒ ಕಚೇರಿ ಮುಂಭಾಗ ಪ್ರತಿಭಟನೆ




