Actor Doddanna : ಬದುಕಿರುವಾಗಲೇ ಸತ್ತಿದ್ದಾರೆ ಎಂದು ಪೋಸ್ಟ್ ಹಂಚಲಾಗಿದೆ.

ಹಿರಿಯ ನಟ ದೊಡ್ಡನ್ಣ ನಿಧನ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ವಿಭಾಗದ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ ನಟ ದೊಡ್ಡಣ್ಣ. ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗೇಡಿಗಳ ವಿರುದ್ಧ ದೂರು ನೀಡಿದ್ದಾರೆ Doddanna.

ಬದುಕಿರುವಾಗಲೇ ಸತ್ತಿದ್ದಾರೆ ಎಂದು ಪೋಸ್ಟ್
AI ತಂತ್ರಜ್ಞಾನ ಬಳಸಿ ನಕಲಿ ಪೋಸ್ಟರ್ ಸೃಷ್ಟಿಸಿ ಬದುಕಿರುವಾಗಲೇ ಸತ್ತಿದ್ದಾರೆ ಎಂದು ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಮಾಡಲಾಗಿದೆ. ಇದರಿಂದ ಮಾನಸಿಕ ನೋವು ಹಾಗೂ ಆಘಾತ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರು ಆಧರಿಸಿ ಅಪರಿಚಿತ ಆರೋಪಿಗಳ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಉತ್ತರ ವಿಭಾಗದ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನು ಓದಿ : ಸಾವಿನ ವದಂತಿ ಬೆನ್ನಲ್ಲೇ ಆಂಜನೇಯನ ಮೊರೆ ಹೋದ ನಟ ದೊಡ್ಡಣ್ಣ

ಇದಕ್ಕೂ ಮುಂಚೆ ವಿಡಿಯೋ ಮೂಲಕ ನಟ ಹೇಳಿದ್ದೇನು?
“ನಾನು ಆರೋಗ್ಯವಾಗಿದ್ದೇನೆ, ನೆಮ್ಮದಿಯಾಗಿದ್ದೇನೆ. ಬೆಳಗ್ಗೆಯಿಂದ ಅನೇಕ ಕರೆಗಳು ಬರುತ್ತಿದ್ದವು. ಅದಕ್ಕಾಗಿ ಈ ವಿಡಿಯೋ ಮೂಲಕ ಸ್ಪಷ್ಟನೆ ನೀಡುತ್ತಿದ್ದೇನೆ. ನಿಮ್ಮ ಆಶೀರ್ವಾದ ಇರುವವರೆಗೆ ನಾನು ಚೆನ್ನಾಗಿರುತ್ತೇನೆ. ಸುಳ್ಳು ಸುದ್ದಿ ಹರಡಿದವರನ್ನು ಬಿಡುವುದಿಲ್ಲ” ಎಂದು ದೊಡ್ಡಣ್ಣ ಹೇಳಿದ್ದರು.
ಸುಳ್ಳು ಸುದ್ದಿಯನ್ನ ನಂಬಬಾರದು ಎಂದು Dodanna ಮನವಿ
ಫೇಸ್ಬುಕ್ನ ಒಂದು ಪೇಜ್ನಲ್ಲಿ ದೊಡ್ಡಣ್ಣ ನಿಧನರಾಗಿದ್ದಾರೆ ಎಂಬ ನಕಲಿ ಹಾಗೂ ಎಡಿಟೆಡ್ ಪೋಸ್ಟರ್ ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ದೊಡ್ಡಣ್ಣ ಸ್ವತಃ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದರು. ಸುಳ್ಳು ಸುದ್ದಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಹಾಗೂ ಅಧಿಕೃತ ಮಾಹಿತಿಯನ್ನಷ್ಟೇ ನಂಬಬೇಕು ಎಂದು ದೊಡ್ಡಣ್ಣ ಮನವಿ ಮಾಡಿದ್ದರು.

ಇದನ್ನು ನೋಡಿ : ಕೊಡಗಿನಲ್ಲಿ FOOTBALL WORLD CUP CRAZ..! – ಊರಿನ ತುಂಬಾ ಫುಟ್ಬಾಲ್ ಆಟಗಾರರ ಕಟೌಟ್




