Rishab Shetty : ಕಾಂತಾರ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ ದೈವಕೋಲದಲ್ಲಿ ಭಾಗಿಯಾಗಿ ಮಂಗಳೂರಿನ ಬಾರೆಬೈಲ್ನಲ್ಲಿ ಇರುವ ದೈವಸ್ಥಾನದಲ್ಲಿ ಹೊತ್ತ ಹರಕೆಯನ್ನ ತೀರಿಸಿದ್ದಾರೆ.

Rishab Shetty : ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಕುಟುಂಬ ಹಾಗೂ ಚಿತ್ರತಂಡದೊಂದಿಗೆ ಬಾರೆಬೈಲ್ ದೇವಸ್ಥಾನದಲ್ಲಿ ನಡೆದ ದೈವಕೋಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೇಡಿಕೊಂಡಿದ್ದ ಹರಕೆಯನ್ನು ತೀರಿಸಿದ್ದಾರೆ.
ದೈವಕೋಲದಲ್ಲಿ ಹರಕೆ ತೀರಿಸಿದ ರಿಷಬ್ ಶೆಟ್ಟಿ
‘ಕಾಂತಾರ ಚಾಪ್ಟರ್-1’ ಶೂಟಿಂಗ್ ಸಂದರ್ಭದಲ್ಲಿ ಚಿತ್ರತಂಡ ಹಲವು ಸವಾಲುಗಳು ಮತ್ತು ವಿಘ್ನಗಳನ್ನು ಎದುರಿಸಿತ್ತು. ಈ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್ ಮತ್ತು ರಿಷಬ್ ಶೆಟ್ಟಿ ಅನೇಕ ಕಡೆಗಳಲ್ಲಿ ದೈವಕ್ಕೆ ಹರಕೆ ಹೊತ್ತಿದ್ದರು.
ಹೊಂಬಾಳೆ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ್ರಾಮ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೇರಿದಂತೆ ಚಿತ್ರತಂಡ ಮತ್ತು ರಿಷಬ್ ಶೆಟ್ಟಿಯ ಕುಟುಂಬ ಸದಸ್ಯರು ದೇವಸ್ಥಾನಕ್ಕೆ ಆಗಮಿಸಿದರು.
ಕಾಂತಾರ ಪಾರ್ಟ್ 3ಕ್ಕೆ ಸೂಚನೆನಾ?
ರಿಷಬ್ ಶೆಟ್ಟಿ ಮತ್ತು ತಂಡ ಗಗ್ಗರ ಸೇವೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ದೈವವು ಸಂತೃಪ್ತಗೊಂಡು ರಿಷಬ್ ಶೆಟ್ಟಿಯ ಮಡಿಲಲ್ಲಿ ಮಲಗಿ ಅವರಿಗೆ ಅಭಯ ನೀಡಿದ ದೃಶ್ಯವು ಅಲ್ಲಿ ಇರುವವರನ್ನು ಕಂಗೊಳಿಸಿತು.
ವಿಜಯ್ ಕಿರಗಂದೂರು ಮತ್ತು ರಿಷಬ್ ಶೆಟ್ಟಿ ಕೈಹಿಡಿದಿರುವಾಗ ದೈವ ಮಲಗಿ ನೀಡಿದ ಅಭಯ, ತಂಡಕ್ಕೆ ವಿಶೇಷ ಆಶೀರ್ವಾದ ದೊರೆತ ಸೂಚನೆ ನೀಡಿದೆ ಎನ್ನಲಾಗ್ತಿದೆ.
ಇದನ್ನೂ ಓದಿ: Rishab Shetty : ಕಣ್ಣೀರು ಸುರಿಸಬೇಡ ನಿನ್ನ ಹಿಂದೆ ನಾನಿದ್ದೇನೆ – ರಿಷಬ್ಗೆ ಪಂಜುರ್ಲಿ ಅಭಯ
ಭಾವಿ ಯೋಜನೆಗಳ ಸೂಚನೆ – ಕಾಂತಾರ ಪಾರ್ಟ್ 3?
ಕಾಂತಾರ ಚಾಪ್ಟರ್-1 ಬಿಡುಗಡೆಯಾದಾಗಿನಿಂದಲೂ ರಿಷಬ್ ಶೆಟ್ಟಿ ‘ಪಾರ್ಟ್-3’ ಬಗ್ಗೆ ಯೋಚಿಸುತ್ತಿದ್ದರು ಎಂಬ ಸುದ್ದಿ ಕೇಳಿಬರುತ್ತಿತ್ತು. ಈಗ ದೈವದ ಅಭಯ ಸಿಕ್ಕ ಹಿನ್ನೆಲೆ, ರಿಷಬ್ ಶೆಟ್ಟಿ ಮುಂದಿನ ಹಂತಕ್ಕೆ ಧೈರ್ಯದಿಂದ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಭರ್ಜರಿ ಅಧ್ಯಾಯವನ್ನು ಬರೆಯಲು ಕಾಂತಾರ ತಂಡ ಸಿದ್ಧತೆಗಳನ್ನು ಆರಂಭಿಸುವ ಸಾಧ್ಯತೆಯಿದ್ದು, ಸದ್ಯದಲ್ಲೇ ಕಾಂತಾರ ತಂಡದಿಂದ ಹೊಸ ಸಮಾಚಾರ ಹೊರ ಬೀಳುವ ನಿರೀಕ್ಷೆಯಿದೆ.
MUST WATCH: KANTARA SHOW CANCELLED | S MALL ನಲ್ಲಿ ಫುಲ್ ಫೈಟ್




