Rishab Shetty : “ಕಣ್ಣೀರು ಸುರಿಸಬೇಡ… ನಿನ್ನ ಹಿಂದೆ ನಾನಿದ್ದೇನೆ” ಎಂದು ಪಂಜುರ್ಲಿ ದೈವ ರಿಷಬ್ ಶೆಟ್ಟಿಗೆ ನೀಡಿದ ಅಭಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

Rishab Shetty : ಕಣ್ಣೀರು ಸುರಿಸಬೇಡ… ನಿನ್ನ ಹಿಂದೆ ನಾನಿದ್ದೇನೆ” ಎಂದು ಪಂಜುರ್ಲಿ ದೈವ ರಿಷಬ್ ಶೆಟ್ಟಿಗೆ ನೀಡಿದ ಅಭಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.
ಕಾಂತಾರ ಎ ಲೆಜೆಂಡ್ ಚಾಪ್ಟರ್–1 ಚಿತ್ರದ ಭರ್ಜರಿ ಯಶಸ್ಸಿನ ನಂತರ, ಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮೋತ್ಸವ ವಿಜೃಂಭಣೆಯಿಂದ ನೆರವೇರಿತು.
ಈ ನೇಮವನ್ನು ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ತಂಡದಿಂದ ಆಯೋಜಿಸಲಾಗಿತ್ತು.
ಕೋಲ ಸೇವೆಯ ವೇಳೆ ಪಂಜುರ್ಲಿ ದೈವ ರಿಷಬ್ ಶೆಟ್ಟಿಯನ್ನು ಮಡಿಲಲ್ಲಿ ಅಪ್ಪಿಕೊಂಡಂತೆ ತೋರಿ, ಕೈಭಾಷೆಯ ಮೂಲಕ “ನಿನ್ನ ಹಿಂದೆ ನಾನಿದ್ದೇನೆ” ಎಂದು ಅಭಯ ನೀಡಿದ ಕ್ಷಣ ಎಲ್ಲರ ಮನಸ್ಸಿಗೂ ಸ್ಪರ್ಶಿಸಿತು.
ವೀಳ್ಯ ಶಕುನದ ಮೂಲಕ ದೈವ “ನಾನು ಸಂತುಷ್ಟನಾಗಿದ್ದೇನೆ” ಎಂದು ಸೂಚಿಸಿತು.
ಕೋಲಕ್ಕೂ ಮುನ್ನ ವಾರಾಹಿ ಪಂಜುರ್ಲಿಗೆ ಎಣ್ಣೆ ಬೂಳ್ಯ ನೆರವೇರಿಸಲಾಯಿತು —
ತುಳುನಾಡಿನ ಅತ್ಯಂತ ಪ್ರಮುಖ ಸಾಂಪ್ರದಾಯಿಕ ವಿಧಿವಿಧಾನ. ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ದೈವ ಅನುಗ್ರಹ ನೀಡಿತ್ತು.

ಮಧ್ಯರಾತ್ರಿ ತನಕ ನಡೆದ ಈ ಕೋಲ ಸೇವೆಯಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ್ ರಾಮ್, ರಿಷಭ್ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ಹಲವಾರು ಕಲಾವಿದರು,
ತಂತ್ರಜ್ಞರು ಮತ್ತು ಸಂಘಟನೆ ಸದಸ್ಯರು ಪಾಲ್ಗೊಂಡಿದ್ದರು. ಗಗ್ಗರ ಸೇವೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದಲ್ಲೂ ಕಾಂತಾರ ಚಿತ್ರತಂಡ ಭಾಗವಹಿಸಿತು.
ಕಾಂತಾರ ಮೊದಲ ಸಿನಿಮಾ ಬಿಡುಗಡೆಯ ಮುನ್ನವೇ, ರಿಷಬ್ ಶೆಟ್ಟಿ ಕುಟುಂಬ ಇದೇ ದೈವಸ್ಥಾನದಲ್ಲಿ ನೇಮ ತಿರ್ತಿದ್ದರು. ಮಗನ ಹುಟ್ಟುಹಬ್ಬದ ದಿನ ದೈವಸ್ಥಾನಕ್ಕೆ ಬಂದು ಚಿತ್ರಕ್ಕೆ ಯಾವುದೇ ಅಡಚಣೆ ಬಾರದಿರಲಿ ಎಂದು ಪ್ರಾರ್ಥಿಸಿದ್ದರು. ಆ ಸಂದರ್ಭದಲ್ಲಿ ದೈವ ಸಿನಿಮಾ ಕ್ಷೇತ್ರದ ವಿರೋಧಿಗಳ ಬಗ್ಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿತ್ತು.
ಈಗ ಎರಡನೇ ಸಿನಿಮಾ ಯಶಸ್ವಿಯಾದ ಹಿನ್ನೆಲೆ, ಚಿತ್ರತಂಡ ಮತ್ತೊಮ್ಮೆ ದೈವಸ್ಥಾನಕ್ಕೆ ಬಂದು ಹರಕೆಯನ್ನು ತೀರಿಸಿರುವುದು ಆ ಪ್ರದೇಶದಲ್ಲಿ ಭಕ್ತರೆಲ್ಲರ ಹರ್ಷಕ್ಕೆ ಕಾರಣವಾಗಿದೆ.




