
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಾದ ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ ಮೂಲಕ ಮನೆಮಾತಾಗಿದ್ದ ನಟಿ ಮಾನಸಾ ಗುರುಸ್ವಾಮಿ ಮತ್ತು ಶಿವಕುಮಾರ್ ಅಲಿಯಾಸ್ ಶಿವು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪೊಟೋಸ್ ವೈರಲ್
ಇನ್ನು ಮದುವೆಯ ಸಂಭ್ರಮ ಏಪ್ರಿಲ್ 25 ಮತ್ತು 26ರಂದು ಅದ್ಧೂರಿಯಾಗಿ ನೆರವೇರಿದೆ. ವಿವಾಹ ಪೂರ್ವ ಕಾರ್ಯಕ್ರಮಗಳಾದ ಮೆಹಂದಿ, ಹಳದಿ ಶಾಸ್ತ್ರ ಹಾಗೂ ಬಳೆ ಶಾಸ್ತ್ರಗಳು ನೆರವೇರಿದ್ದು, ಈ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
READ THIS : ಘೋರ ಘಟನೆ – ಗುಂಡು ಹಾರಿಸಿಕೊಂಡು ಸರ್ಕಾರಿ ಶಾಲೆ ಶಿಕ್ಷಕಿ ಸಾವು!

ವೈವಾಹಿಕ ಜೀವನಕ್ಕೆ ಕಾಲಿಟ್ಟ Shivu-Manasa
ಮಾನಸಾ ಮತ್ತು ಶಿವು ಇಬ್ಬರೂ ಕಿರುತೆರೆಯಿಂದಲೇ ಪರಿಚಿತರಾಗಿದ್ದು, ಮಜಾ ಭಾರತ ಕಾಲದಿಂದಲೇ ಒಂದಾಗಿ ಕಾಮಿಡಿ ಸ್ಕಿಟ್ಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ನಂತರ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿಯೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಈ ಕಾರ್ಯಕ್ರಮದಿಂದಲೇ ಇವರ ಸ್ನೇಹ ಪ್ರೀತಿಗೆ ತಿರುಗಿದ್ದು, ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹಲವು ಕಿರುತೆರೆ ತಾರೆಯರು ಭಾಗಿ
Shivu-Manasa ಅದ್ದೂರಿ ಮೆಹಂದಿ ಶಾಸ್ತ್ರದಲ್ಲಿ ಸುಷ್ಮಿತಾ ಜಗ್ಗಪ್ಪ, ನಿರೂಪಕ ನಿರಂಜನ್ ದೇಶಪಾಂಡೆ ಪತ್ನಿ ಯಶಸ್ವಿನಿ ಸೇರಿದಂತೆ ಹಲವು ಕಿರುತೆರೆ ತಾರೆಯರು ಭಾಗಿಯಾಗಿದ್ದರು. ಈ ಹಿಂದೆ ಇದೇ ಶೋನಲ್ಲಿ ಕಾಣಿಸಿಕೊಂಡಿದ್ದ ಸುಷ್ಮಿತಾ ಮತ್ತು ಜಗಪ್ಪ ಅವರು ಹೀಗೆ ಪ್ರೀತಿಸಿ ಮದುವೆ ಆಗಿದ್ದರು.

MUST WATCH : ಡಾ. ರಾಜ್ ಸಮಾಧಿ ಬಗ್ಗೆ ಚೇತನ್ ಆಕ್ಷೇಪ – ಚೇತನ್ ವಿರುದ್ಧ ರೊಚ್ಚಿಗೆದ್ದ ಅಣ್ಣಾವ್ರ ಫ್ಯಾನ್ಸ್




