Belagavi Crime News : ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರನ್ನೇ ಬೆದರಿಸಿ ಕಳ್ಳರ ಗ್ಯಾಂಗ್ ಪರಾರಿಯಾದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆ ಕಳ್ಳತನಕ್ಕೆ ಯತ್ನಿಸಿದ ಮೂವರು ಕಳ್ಳರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾದ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ.

Belagavi Crime News : ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸರನ್ನೇ ಬೆದರಿಸಿ ಕಳ್ಳರ ಗ್ಯಾಂಗ್ ಪರಾರಿಯಾದ ಘಟನೆ ನಡೆದಿದೆ. ನಿಪ್ಪಾಣಿ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿರುವ ನಡುವೆ ಈ ಘಟನೆ ಭದ್ರತೆ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ.
ಮನೆ ಕಳ್ಳತನಕ್ಕೆ ಯತ್ನಿಸುತ್ತಿದ್ದ ಮೂವರು ಕಳ್ಳರು ಗಸ್ತು ತಿರುಗುತ್ತಿದ್ದ ಪೊಲೀಸರನ್ನು ನೋಡಿ ಅಡಗಿ ಕುಳಿತುಕೊಂಡಿದ್ದರು. ಅನುಮಾನಗೊಂಡ ಪೊಲೀಸರು ಸ್ಥಳಕ್ಕೆ ವಾಪಸ್ ಬಂದಾಗ, ಕಳ್ಳರು ಅವರ ಮೇಲೆಯೇ ದಾಳಿ ಮಾಡಲು ಯತ್ನಿಸಿ, ಅವರನ್ನು ತಳ್ಳಿ ಪರಾರಿಯಾದರು.
ಇದನ್ನು ಓದಿ : Accident|ಶಿವಮೊಗ್ಗದಲ್ಲಿ ಭೀಕರ ಅಪಘಾತ-ಸ್ಥಳದಲ್ಲೇ ಇಬ್ಬರು ಯುವಕರ ಸಾವು.!
ಕೈಯಲ್ಲಿ ಬಂದೂಕು ಇದ್ದರೂ, ಕಳ್ಳರು ಭಯಪಡದೇ ಪೊಲೀಸರು ಮೇಲೆ ಹಲ್ಲೆಗೆ ಮುಂದಾಗಿದ್ದು, ಪೊಲೀಸರ ಸುರಕ್ಷತಾ ಕ್ರಮಗಳ ಬಗ್ಗೆ ಅನುಮಾನ ಹುಟ್ಟಿಸಿದೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ.
ನಿಪ್ಪಾಣಿ ನಗರದಲ್ಲಿನ ಮಾನೆ ಪ್ಲಾಟ್ ಪ್ರದೇಶದಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದ್ದು, ಪೊಲೀಸರು ಕಳ್ಳರ ಗ್ಯಾಂಗ್ ಪತ್ತೆಗಾಗಿ ಜಾಲ ಬೀಗಿದ್ದಾರೆ.
ಇದನ್ನು ನೋಡಿ : AMBEDKAR ಅವರ 69ನೇ ಪರಿನಿರ್ವಾಣ ದಿನ – ಪುಷ್ಪ ನಮನ ಸಲ್ಲಿಸಿ CM ಪವರ್ ಪುಲ್ ಮಾತು




