Shivamogga : ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ನವವಿವಾಹಿತ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

Shivamogga :: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ಮದುವೆಯಾದ ಮರುದಿನವೇ ನವವಿವಾಹಿತ ರಮೇಶ್ (30) ಎಂಬುವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ರಮೇಶ್ ಇತ್ತೀಚೆಗೆ ಭಾನುವಾರವಷ್ಟೇ (ನವೆಂಬರ್ 30) ಹರಪ್ಪನಹಳ್ಳಿ ಸಮೀಪದ ಬಂಡ್ರಿಯ ಮಧುವನ್ನು ವರಿಸಿದ್ದರು.
ಮದುವೆಯಾದ ಮರುದಿನವೇ ಹೃದಯಾಘಾತ ನವವಿವಾಹಿತ ಸಾವು
ಮದುವೆಯ ನಂತರ ರಮೇಶ್ ಮತ್ತು ಅವರ ವಧು ದೇವಸ್ಥಾನದಿಂದ ಮೆರವಣಿಗೆಯ ಮೂಲಕ ವಧುವಿನ ಮನೆಗೆ ತೆರಳಿದ್ದರು. ವಧುವಿನ ಮನೆ ತಲುಪಿದ ವೇಳೆ, ದೇವರಿಗೆ ಕೈ ಮುಗಿಯಲು ಹೋಗುತ್ತಿದ್ದಾಗ ರಮೇಶ್ ಕುಸಿದು ಬಿದ್ದಿದ್ದಾರೆ.
ಆಸ್ಪತ್ರೆಗೆ ತಲುಪಿಸುವ ಮುನ್ನ ರಮೇಶ್ ಸಾವನ್ನಪ್ಪಿದ್ದಾರೆ. ಮಂಗಳವಾರ ಹೊಳೆಹೊನ್ನೂರು ಸಮೀಪದ ಹೊಸಕೊಪ್ಪದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ಇದನ್ನೂ ಓದಿ: Shivamogga : ಕರ್ತವ್ಯ ನಿರತ KSRTC ಚಾಲಕ ಹೃದಯಾಘಾತದಿಂದ ಸಾವು

ಹೊಸಕೊಪ್ಪದಲ್ಲಿ ಅಂತ್ಯಕ್ರಿಯೆ
ರಮೇಶ್ ಅವರ ಮದುವೆ ಶಿವಮೊಗ್ಗದ ಬಿ.ಹೆಚ್ ರಸ್ತೆಯ ಗಂಗಾ ಪ್ರಿಯಾ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. 1 ವರ್ಷದ ನಿಶ್ಚಯದ ನಂತರ ಈ ಮದುವೆ ನಡೆದಿದ್ದು, ಕುಟುಂಬ ಮತ್ತು ಸ್ನೇಹಿತರು ಸಂಭ್ರಮದಲ್ಲಿ ಇದ್ದರು. ಆದರೆ ಇದೀಗ ಮದುವೆ ಮನೆಯಲ್ಲಿ ಶೋಕ ಮಡುಗಟ್ಟಿದೆ.
MUST WATCH: HEART ATTACK | ಕೆಲಸ ಮಾಡ್ತಾ ಇದ್ದ ವೇಳೆಯೇ ಹಾರ್ಟ್ ಅಟ್ಯಾಕ್




