Heart Attack : ಕರ್ತವ್ಯ ನಿರತ ಕೆಎಸ್ಆರ್ಟಿಸಿ ನೌಕರರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Heart Attack : ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವ ಕೆಎಸ್ಆರ್ಟಿಸಿ ಡಿಪೋದಲ್ಲಿ ಕರ್ತವ್ಯ ನಿರತ ನೌಕರರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಕುಸಿದು ಬಿದ್ದು ಸಾವು
KSRTC ಬಸ್ ಚಾಲಕ ಸಂದೀಪ್ (41) ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಇದನ್ನು ಓದಿ : ಮುದ್ದಿನ ನಾಯಿ ಮರಿ ಹುಟ್ಟುಹಬ್ಬ ಆಚರಿಸಿದ ರಾಧಿಕಾ ಪಂಡಿತ್
ಚಿಕಿತ್ಸೆ ಫಲಿಸದೇ ಸಾವು
ತಕ್ಷಣ ಅವರ ಸಹೋದ್ಯೋಗಿಗಳು ಸಂದೀಪ್ ಅವರನ್ನು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರೂ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಸಹಾಯ ಧನ ನೀಡಬೇಕೆಂದು ಮನವಿ
ಮಾರಿಕಾಂಬ ದೇವಸ್ಥಾನದ ಹಿಂಭಾಗ ರಸ್ತೆಯ ನಿವಾಸಿಯಾದ ಸಂದೀಪ್ ಅವರು ಸಹೋದರರು ಸಂದೀಪ್ ಕುಟುಂಬಕ್ಕೆ ಸರ್ಕಾರದಿಂದ ಸಹಾಯ ಧನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನು ನೋಡಿ : ಪೊದೆಯಲ್ಲಿ ವ್ಯಕ್ತಿಯ ಮೃ*ದೇಹ ಪತ್ತೆ ಕೊಳೆತ ಶ* ಕಂಡು ಬೆಚ್ಚಿ ಬಿದ್ದ ಜನರು




