Radhika Pandit : ರಾಕಿಂಗ್ ಸ್ಟಾರ್ ಯಶ್ ಕುಟುಂಬ ತಮ್ಮ ಮನೆಯ ಮುದ್ದಿನ ನಾಯಿಮರಿ ಕೊಕೊ ಹುಟ್ಟುಹಬ್ಬವನ್ನು ಪೂರ್ತಿ ಫ್ಯಾಮಿಲಿ ಸೇರಿ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ರಾಧಿಕಾ ಪಂಡಿತ್ ತಮ್ಮ ಮನೆಯಲ್ಲಿ ಸಾಕಿರುವ ಮುದ್ದಾದ ಶ್ವಾನ ಕೊಕೊನ 2ನೇ ಹುಟ್ಟುಹಬ್ಬದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಕೊಕೊಗೆ 2ವರ್ಷದ ಹುಟ್ಟುಹಬ್ಬ
ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಮುದ್ದಾದ ಶ್ವಾನ ಕೊಕೊಗೆ 2 ವರ್ಷ ಪೂರ್ಣವಾಗಿದ್ದು, ಕುಟುಂಬದೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಕೊಕೊ ಯಶ್ ಕುಟುಂಬದ ಭಾಗವಾಗಿದ್ದು, ಎಲ್ಲೆಡೆ ಜೊತೆಗೆ ಇರುತ್ತದೆ.
ಇದನ್ನು ಓದಿ : ಖ್ಯಾತ ಖಳನಟ ಹರೀಶ್ ರಾಯ್ ನಿಧನ

ಸ್ಪೆಷಲ್ ಕೇಕ್ ಮತ್ತು ಸೆಲೆಬ್ರೇಷನ್
ಕೊಕೊಗೆ ವಿಶೇಷವಾಗಿ ಕೊಕೊ ಮುಖವಿರುವ ಪುಟ್ಟ ಕೇಕ್ ತಯಾರಿಸಲಾಗಿದೆ. ಕೇಕ್ ಮೇಲೆ “Happy Birthday Coco 2” ಎಂದು ಬರೆಯಲಾಗಿದೆ. ಹುಟ್ಟುಹಬ್ಬದ ಸಂಭ್ರಮವನ್ನು ರಾಧಿಕಾ ಪಂಡಿತ್, ಮಕ್ಕಳು ಯಥರ್ವ್ ಮತ್ತು ಆಯ್ರ, ತಂದೆ-ತಾಯಿ ಹಾಗೂ ಮನೆಯ ಸಿಬ್ಬಂದಿ ಜೊತೆ ಆಚರಿಸಲಾಗಿದೆ.

ಯಶ್ ಮಿಸ್ಸಿಂಗ್
ಇತ್ತೀಚೆಗೆ ಮಗ ಯಥರ್ವ್ ಹುಟ್ಟುಹಬ್ಬದಲ್ಲಿ ಹಾಜರಾದ ಯಶ್, ಈ ಬಾರಿ ಟಾಕ್ಸಿಕ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರಿಂದ ಕೊಕೊ ಹುಟ್ಟುಹಬ್ಬಕ್ಕೆ ಹಾಜರಾಗಲಿಲ್ಲ.
ರಾಧಿಕಾ ಪಂಡಿತ್ ಸ್ಪೆಷಲ್ ವಿಶ್
ಕೊಕೊ ಜೊತೆಗಿನ ಮುದ್ದಾದ ಫೋಟೊಗಳನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ ಕಂಡೀಶನ್ ಗಳಿಂದ ತುಂಬಿರುವ ಈ ಜಗತ್ತಿನಲ್ಲಿ, ಅಚಲವಾದ ವಾತ್ಸಲ್ಯ ಹೇಗಿರುತ್ತದೆ ಎಂಬುದನ್ನು ಅವಳು ನಮಗೆ ನೆನಪಿಸುತ್ತಾಳೆ. ಹುಟ್ಟುಹಬ್ಬದ ಶುಭಾಶಯಗಳು, ಕೊಕೊ ಎಂದು ಬೆರೆದುಕೊಂಡಿದ್ದಾರೆ.

ಇದನ್ನು ನೋಡಿ : ಮುದ್ದಿನ ನಾಯಿ ಮರಿ ಹುಟ್ಟುಹಬ್ಬ ಆಚರಿಸಿದ Radhika Pandit & ಫ್ಯಾಮಿಲಿ…. Yash ಮಿಸ್ಸಿಂಗ್




