Tumkuru : ಮೋದಿಯವರು ಉಡುಪಿಯ ಕಾರ್ಯಕ್ರಮದಲ್ಲಿ ಮಿರಮಿರ ಮಿಂಚುವಂತೆ ಮಾಡಿದ್ದು, ಅವರು ಧರಿಸಿದ್ದ ಪೇಟ. ಆ ಪೇಟಾವನ್ನು ತಯಾರಿಸಿದ್ದು ನಮ್ಮ ತುಮಕೂರಿನ ವಿನ್ಯಾಸಕಿ ಉಷಾ ಅವರು.

Tumkuru: ಉಡುಪಿಯಲ್ಲಿ ಶುಕ್ರವಾರ ನಡೆದ ಭವ್ಯ ಲಕ್ಷ ಕಂಠ ಭಗವದ್ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದರು. ಆದರೆ ವೇದಿಕೆಯ ಮೇಲೆ ಮೋದಿಯವರು ಧರಿಸಿದ್ದ ಮಿರಮಿರ ಮಿಂಚುವ ಮೈಸೂರು ಪೇಟ.
ಮೋದಿಯವರ ತಲೆಯಲ್ಲಿ ಮಿಂಚಿದ ‘ತುಮಕೂರು ಪೇಟ’
ಕಾರ್ಯಕ್ರಮದ ವೇಳೆ ಪುತ್ತಿಗೆ ಮಠದ ಶ್ರೀಗಳು ಮೋದಿಯವರಿಗೆ ‘ಭಾರತ ಭಾಗ್ಯ ವಿಧಾತ’ ಎಂಬ ಬಿರುದನ್ನು ನೀಡಿ ಮೈಸೂರು ಪೇಟ ತೊಡಿಸಿ ಗೌರವ ಸಲ್ಲಿಸಿದರು. ಪ್ರಧಾನಿಯವರ ತಲೆಯ ಮೇಲೆ ಮಿನುಗಿದ ಆ ಪೇಟವನ್ನು ತಯಾರಿಸಿದ್ದು ನಮ್ಮ ತುಮಕೂರಿನ ಉಷಾ ಅವರೇ ಎಂಬುದು ತಿಳಿದು ತುಮಕೂರಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ಉಡುಪಿಯ ಕಾರ್ಯಕ್ರಮದಲ್ಲಿ ಕಣ್ಣು ಸೆಳೆದ ಮೈಸೂರು ಪೇ
ನಗರದ ಚಿಕ್ಕಪೇಟೆಯ ನಿವಾಸಿ ಉಷಾ ಭಾಸ್ಕರ್ ಅವರು ನವಿಲು ಗರಿ ಮತ್ತು ಮುತ್ತುಗಳನ್ನು ಬಳಸಿ ಅದ್ಭುತವಾಗಿ ಈ ಪೇಟ ಸಿದ್ಧಪಡಿಸಿದ್ದರು. ಉಡುಪಿಯ ವಿಷ್ಣು ಫ್ಲವರ್ ಸ್ಟಾಲ್ ಮೂಲಕ ಪ್ರಧಾನಿಯವರಿಗಾಗಿ ವಿಶೇಷ ಪೇಟ ಬೇಕೆಂದು ವಿನಂತಿ ಬಂದ ಹಿನ್ನೆಲೆಯಲ್ಲಿ, ಉಷಾ ಅವರು ತಮ್ಮ ಕಲಾತ್ಮಕ ಸ್ಪರ್ಶದೊಂದಿಗೆ ಪೇಟವನ್ನು ನಿರ್ಮಿಸಿ ಕಳುಹಿಸಿದ್ದರು.
ಇದನ್ನೂ ಓದಿ : Tumakuru : ತುಮಕೂರಿನಲ್ಲಿ ಫುಲ್ ಕೂಲ್ ಕೂಲ್ ವೆದರ್
ವಿನ್ಯಾಸಕಿ ಉಷಾ ಭಾಸ್ಕರ್ ಅವರಿಗೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ
ಉಷಾ ಭಾಸ್ಕರ್ ಮಾತನಾಡಿ, ಹಲವಾರು ವರ್ಷಗಳಿಂದ ಕಲಾತ್ಮಕ ಕೆಲಸಗಳಲ್ಲಿ ತೊಡಗಿದ್ದೇನೆ. ಪ್ರಧಾನಿ ಮೋದಿಯವರಿಗೆ ಪೇಟ ಸಿದ್ಧಪಡಿಸುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ಸಾಮಾನ್ಯ ಬಟ್ಟೆ ಮತ್ತು ಮಣಿಗಳನ್ನು ಬಳಸಿ ಪೇಟ ಮಾಡಿದ್ದರೂ, ಅದನ್ನು ಮೋದಿ ಅವರು ಧರಿಸಿದ ನಂತರ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ,” ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಧರಿಸಿದ್ದ ಮೈಸೂರು ಪೇಟ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದನ್ನು ತಯಾರಿಸಿದ ಉಷಾ ಭಾಸ್ಕರ್ ಅವರ ಪ್ರತಿಭೆ ದೇಶದ ಗಮನ ಸೆಳೆಯುತ್ತಿದೆ.
MUST WATCH: ಉಡುಪಿಯಲ್ಲಿ ಪೇಟ ತೋಟ್ಟಿ ಮಿಂಚಿದ ಮೋದಿ




