Tumakuru Weather : ರಾಜ್ಯದಲ್ಲಿ ತಾಪಮಾನ ಕುಸಿದಿದ್ದ ಹೊತ್ತಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದಲ್ಲಿ ಚಳಿಯ ಜೊತೆ ಮಳೆ ಆಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ತಾಪಮಾನ ಕುಸಿದಿದ್ದ ಹೊತ್ತಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದಲ್ಲಿ ಚಳಿಯ ಜೊತೆ ಮಳೆ ಆಗುವ ಸಾಧ್ಯತೆ ಇದೆ. ಚಳಿ ಶುರುವಾಗಿದ್ದು, ಇದ್ರ ನಡುವೆ ಸಣ್ಣ ಪ್ರಮಾಣದಲ್ಲಿ ಇಂದು ಮತ್ತು ನಾಳೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತುಮಕೂರಿನಲ್ಲಿ ಫುಲ್ ಚಳಿ
ಇನ್ನು ತುಮಕೂರಿನಲ್ಲಿ ನಿನ್ನೆಯಿಂದ ತಾಪಮಾನ ಕಡಿಮೆ ಆಗಿದ್ದು, ಫುಲ್ ಚಳಿ ಶುರುವಾಗಿದೆ. ಭೀಕರ ಚಳಿಗೆ ಜನರು ಥಂಡಾ ಹೊಡೆದಿದ್ದಾರೆ. ನಿನ್ನೆಯಿಂದಲೂ ತುಮಕೂರಿನಲ್ಲಿ ನಿನ್ನೆಯಿಂದಲೂ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ತುಮಕೂರು ಫುಲ್ ಕೂಲ್ ಕೂಲ್ ಆಗಿದೆ.
ಇಂದು ಬೆಳಗ್ಗೆಯಿಂದ ಮಧ್ಯಾಹ್ನದರೆಗೆ ಬಿಸಿಲು ಇದ್ದು, ಮಧ್ಯಾಹ್ನದ ನಂತರ ಮತ್ತೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಭೀಕರ ಚಳಿ ಆಗ್ತಿದೆ. ಶೀತಗಾಳಿ ಹೆಚ್ಚಳವಾಗಿದ್ದು, ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.
ಇದನ್ನು ಓದಿ : SMAT 2025|ರೋಹಿತ್ ಶರ್ಮಾರ ದಾಖಲೆ ಮುರಿದ ಆಯುಷ್ ಮ್ಹಾತ್ರೆ!

ಚಳಿ ಉಡುಪು ಮಾರಾಟಗಾರರಿಗೆ ಭರ್ಜರಿ ಕಲೆಕ್ಷನ್
ಇನ್ನು ತುಮಕೂರು ಜಿಲ್ಲೆಯಲ್ಲಿ ಭೀಕರ ಚಳಿ ಶುರುವಾಗ್ತಿದ್ದಂತೆ ಜನರು ಬೆಡ್ ಶೀಟ್, ಸ್ಪೆಟರ್, ಮಫ್ಲರ್, ಸ್ಕಾಪ್ ಮೊರೆ ಹೋಗುತ್ತಿದ್ದು, ಜನರು ಅಂಗಡಿಗಳತ್ತ ಮುಖ ಮಾಡಿ ಚಳಿ ಉಡುಪುಗಳನ್ನು ಖರೀದಿ ಮಾಡಲು ಮುಗಿ ಬೀಳ್ತಿದ್ದಾರೆ.
ಇತ್ತ ವ್ಯಾಪಾರಸ್ಥರಿಗೆ ಇದೊಂದು ಒಳ್ಳೆಯ ಕಾಲವಕಾಶವಾಗಿದ್ದು, ರೋಡ್ ಸೈಡ್ಗಳಲ್ಲಿ ಸ್ಟಾಲ್ಗಳನ್ನು ಹಾಕಿಕೊಂಡು ಸಾಪೆಟರ್, ಜಾಕೇಟ್ ಮಾರಾಟ ಮಾಡುತ್ತಿದ್ದಾರೆ. ಚಳಿ ಹೆಚ್ಚಳವಾಗಿದ್ದರಿಂದ ಚಳಿ ಉಡುಪುಗಳಿಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಜನರ ಖರೀದಿ ಭರಾಟೆ ಜೋರಾಗಿದ್ದು, ಚಳಿ ಉಡುಪು ಮಾರಾಟಗಾರರಿಗೆ ಭರ್ಜರಿ ಕಲೆಕ್ಷನ್ ಆಗ್ತಿದೆ ಅಂತಾನೇ ಹೇಳಬಹುದಾಗಿದೆ.
ಒಟ್ನಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಚಳಿ ಪ್ರಮಾಣ ಹೆಚ್ಚಳವಾಗಿದ್ದು, ಡಿಸೆಂಬರ್ ಆರಂಭಕ್ಕೂ ಮುನ್ನವೇ ಚಳಿ ಶುರುವಾಗಿದೆ. ಚಳಿಗೆ ಜನರು ಥಂಡಾ ಹೊಡೆಯುತ್ತಿದ್ದು, ಜನರಲ್ಲಿ ಅನಾರೋಗ್ಯದ ಭೀತಿ ಶುರುವಾಗಿದ್ದು, ಜನರು ಬೆಚ್ಚಗಿರುವಂತೆ ವೈದ್ಯರು ಸಲಹೆ ನೀಡ್ತಿದ್ದಾರೆ.

ಇದನ್ನು ನೋಡಿ : CM CHAIR WAR | ಸಿದ್ಧು 5 ವರ್ಷ ಸಿಎಂ ಆಗಿ ಮುಂದುವರೆಯಲಿ ಅಂತ ತುಮಕೂರಲ್ಲಿ ಏನ್ಮಾಡಿದ್ರು ಗೊತ್ತಾ…!




