Cinema : ಸ್ಯಾಂಡಲ್ವುಡ್ ನಟ ಶ್ರೀ ಮಹದೇವ್ ಅವರ ಮದುವೆ ಸಮಾರಂಭ ಜೊರಾಗಿದೆ. ಇವತ್ತು ಮೈಸೂರಿನಲ್ಲಿ ಮದುವೆ ಸಮಾರಂಭ ನೆರವೇರಿದೆ. ಇಂದು ಸರಳವಾಗಿ ದೇವಸ್ಥಾನ ಮದುವೆ ಸಮಾರಂಭ ನಡೆದಿದೆ.

Cinema : ಸ್ಯಾಂಡಲ್ವುಡ್ನಲ್ಲಿ ಮದುವೆ ಸಡಗರ ಜೋರಾಗಿದೆ. ಇದೀಗ ಸಿನಿಮಾ ಮತ್ತು ಧಾರಾವಾಹಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಯುವ ನಟ ಶ್ರೀ ಮಹದೇವ್ ಅವರು ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು ಸರಳ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ದೇವಾಲಯದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಸ್ನೇಹಿತರು ಪಾಲ್ಗೊಂಡು ಆಶೀರ್ವಾದ ಕೋರಿದರು. ಮಹದೇವ್ ಅವರು ಸ್ಫೂರ್ತಿ ಅವರ ಜೊತೆ ಸಪ್ತಪದಿ ತುಳಿದು ಜೀವನದ ಹೊಸ ಅಧ್ಯಾಯ ಆರಂಭಿಸಿದ್ದಾರೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಿಚ್ಚಿ-ಗಿಲಿಗಿಲಿ Shivu-Manasa

ಡಿಸೆಂಬರ್ 6 ರಂದು ಮೈಸೂರಿನಲ್ಲಿ ಆರತಕ್ಷತೆ ಸಮಾರಂಭ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಹಲವಾರು ಕಲಾವಿದರು, ಗಣ್ಯರು, ತಾಂತ್ರಿಕ ವಲಯದವರು ಹಾಗೂ ಮಹದೇವ್ ಅವರ ಸ್ನೇಹಿತ ವಲಯ ಹಾಜರಾಗಲಿದ್ದಾರೆ.
ಸಿನಿಮಾ ಮತ್ತು ಧಾರಾವಾಹಿಯಲ್ಲಿ ತಮ್ಮದೇ ಆದ ಛಾಪು ಸಿಕ್ಕಿಸಿಕೊಂಡಿರುವ ಮಹದೇವ್, ಕೋಟಿಗೊಬ್ಬ 3, ಗಜಾನನ ಅಂಡ್ ಗ್ಯಾಂಗ್ ಸಿನಿಮಾಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಕಿರುತೆರೆಯಲ್ಲೂ ಅವರು ಕನ್ಯಾಕುಮಾರಿ, ನೀಲಿ, ಶ್ರೀರಸ್ತು ಶುಭಮಸ್ತು ಧಾರಾವಾಹಿಗಳ ಮೂಲಕ ಜನಮನ ಗೆದ್ದಿದ್ದಾರೆ.
MUST WATCH: ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಮನೆಯಲ್ಲಿ ಮದುವೆ ಸಂಭ್ರಮ




