Gicchi Gili Gili Shivu-Manasa : ನಮ್ಮ ನಡುವೆ ಏನೂ ಇಲ್ಲ. ಜಸ್ಟ್ ಫ್ರೆಂಡ್ಸ್ ಅಂತಿದ್ದ ಗಿಚ್ಚಿ-ಗಿಲಿಗಿಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ.

Gicchi Gili Gili Shivu-Manasa : ಇಲ್ಲ ಇಲ್ಲ.. ಆಗೋದಿಲ್ಲ.. ನಮ್ಮ ನಡುವೆ ಏನೂ ಇಲ್ಲ. Just Friends ಅಂತಿದ್ದ ಗಿಚ್ಚಿ-ಗಿಲಿಗಿಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಶಿವು ಮತ್ತು ಮಾನಸ (Shivu-Manasa) ಗಿಚ್ಚಿ ಗಿಲಿಗಿಲಿ ಮೂಲಕ ಈ ಇಬ್ಬರು Famous ಆದ್ರು. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಅಲ್ಲದೇ Social Media ಗಳಲ್ಲಿ ಇವರಿಬ್ಬರ ನಡುವಿನ ಸ್ನೇಹ–ಪ್ರೀತಿ ಸುದ್ದಿಗಳು ಹಲವಾರು ದಿನಗಳಿಂದ ಓಡಾಡುತ್ತಿದ್ದರೂ, ಈಗ ಅದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

ಹಾಸ್ಯದಿಂದ ಅಭಿಮಾನಿಗಳ ಹೃದಯ ಗೆದ್ದ ಜೋಡಿ
ಕಾರ್ಯಕ್ರಮಗಳ ಮೂಲಕ ಜನಪ್ರಿಯರಾದ ಶಿವು ಮತ್ತು ಮಾನಸ, ತಮ್ಮ ಸರಳ ಅಭಿನಯದಿಂದ ಹಾಗೂ ಹಾಸ್ಯ (Comedy) ದಿಂದ ಅಭಿಮಾನಿಗಳ ಹೃದಯ ಗೆದ್ದಿದ್ದರು. ಇವರ ಪ್ರೀತಿಯ ಸುದ್ದಿಯನ್ನು ಆಪ್ತ ಸ್ನೇಹಿತರಷ್ಟೇ ತಿಳಿದಿದ್ದರು. ಆದರೆ ಈಗ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ (Engagement) ದಿನಾಂಕವನ್ನು ಪ್ರಕಟಿಸಿದ್ದಾರೆ.
ಇದನ್ನು ಓದಿ : Hassan|ಅಂಗಡಿ ಶೆಡ್ ಹೊಡೆದು ಹಣ, ವಸ್ತುಗಳನ್ನು ದೋಚಿ ಕಳ್ಳ ಎಸ್ಕೇಪ್

ನಿಶ್ಚಿತಾರ್ಥ ನವೆಂಬರ್ 27ರಂದು
ಕಳೆದ ವರ್ಷ ಶಿವು ಹೊಸ ಮನೆ ಕಟ್ಟಿಕೊಂಡು ಗೃಹ ಪ್ರವೇಶ ಕಾರ್ಯಕ್ರಮನ್ನೂ ನೆರವೇರಿಸಿದ್ದರು. ಈಗ ಮನೆಗೆ ಗೃಹಲಕ್ಷ್ಮಿಯಾಗಿ ಮಾನಸ ಬರಲು ಸಮಯವಾಗಿದೆ. ಈ ತಿಂಗಳ 27ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಶಿವು–ಮಾನಸ ಜೋಡಿಯ ನಿಶ್ಚಿತಾರ್ಥ ನಡೆಯಲಿದ್ದು, ಕುಟುಂಬ–ಸ್ನೇಹಿತರು ಸಜ್ಜಾಗುತ್ತಿದ್ದಾರೆ.

ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗೋಕೆ ರೆಡಿ
ಈ ಕುರಿತು ಶಿವು ಅಣ್ಣನ ಪುಟಾಣಿ ತಂಗಿ ವಂಶಿಕಾ (Vanshika) ಕೂಡ ರಿಯ್ಯಾಕ್ಟ್ ಮಾಡಿದ್ದು, ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗೋಕೆ ರೆಡಿಯಾಗಿದ್ದಾಳೆ.

ಇದನ್ನು ನೋಡಿ : ಚಾಮರಾಜನಗರಕ್ಕೆ CM ENTRY – ಮೂಢನಂಬಿಕೆಗೆ ಗುದ್ದಿದ ಟಗರು..!




