Hassan Theft Case : ಹಾಸನದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ.

ಹಾಸನದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಹಾಸನ ನಗರದ ಪಿಎಂ ಎಂಟರ್ಪ್ರೈಸಸ್ ಅಂಗಡಿಯಲ್ಲಿ ರಾತ್ರಿ ಶೆಡ್ ಹೊಡೆದು ಒಳನುಗ್ಗಿದ ಕಳ್ಳ 8000 ನಗರ ಹಾಗೂ 15 ಸಾವಿರ ರೂಪಾಯಿ ಬೆಲೆ ಬಾಳು ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾನೆ. ಇನ್ನು ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಳಗ್ಗೆ ಎಂದಿನಂತೆ ಅಂಗಡಿಗೆ ಬಂದ ಮಾಲೀಕ ಶೆಡ್ ಹೊಡೆದಿರುವುದನ್ನು ಕಂಡು ಶಾಕ್ ಆಗಿದ್ದಾರೆ.
ಹಾಸನ PM ಎಂಟರ್ಪ್ರೈಸಸ್ ಅಂಗಡಿಯಲ್ಲಿ ಕಳ್ಳನ ಕೈಚಳಕ
ಹಾಸನ ನಗರದ 80 ಫೀಟ್ ರೋಡ್ ಎ ಪಿ ಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಪಿಎಂ ಎಂಟರ್ಪ್ರೈಸಸ್ ಅಂಗಡಿಯಲ್ಲಿ ಈ ಘಟನೆ ನೆಡದಿದ್ದು, ಈ ಬಗ್ಗೆ ಪಿಎಂ ಎಂಟಪ್ರೈಸಸ್ ಮಾಲೀಕರಾದ ಶಾಲೀಜ್ ಅಹಮದ್ ಮಾತನಾಡಿ. ಈ ಹಿಂದೆಯೂ ಕೂಡ 30,000 ಕಳ್ಳತನವಾಗಿತ್ತು.
ಮತ್ತೆ ಇದೀಗ 8000 ನಗದು ಹಾಗೂ ಸರಿಸುಮಾರು 15,000 ಬೆಲೆ ಬಾಳುವ ವಸ್ತುಗಳು ನಿನ್ನೆ ರಾತ್ರಿ ಕಳ್ಳತನವಾಗಿದೆ. ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಕಳ್ಳನ ಕಳ್ಳತನ ಸೆರೆಯಾಗಿದ್ದು, ಪೊಲೀಸ್ ಠಾಣೆಗೆ ಕಂಪ್ಲೇಂಟ್ ನೀಡಿದ್ದೇನೆ ಎಂದರು.
ಇದನ್ನು ಓದಿ : ಉತ್ತರ ರೈಲ್ವೆಯಿಂದ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ – 4,116 ಹುದ್ದೆಗಳಿಗೆ ಅರ್ಜಿ ಆಹ್ವಾನ

ನಮ್ಮ ಹಣ ಮತ್ತು ವಸ್ತುಗಳನ್ನು ವಾಪಾಸ್ ಕೊಡಿಸಿ
ಆದಷ್ಟು ಬೇಗ ಕಳ್ಳನನ್ನು ಹಿಡಿದು, ನಮ್ಮ ಹಣ ಮತ್ತು ವಸ್ತುಗಳನ್ನು ವಾಪಾಸ್ ಕೊಡಿಸಿಕೊಡಿ ಮತ್ತು ಮುಂದಿನ ಇಂತಹ ಘಟನೆಗಳು ನಡೆಯದಂತೆ ಪೊಲೀಸರು ಕ್ರಮಕೈಗೊಳ್ಳಬೇಕಿದೆ ಎಂದು ಮನವಿ ಮಾಡಿದಾರೆ.
ಇದನ್ನು ನೋಡಿ : IND vs SA: ಶುಭ್ಮನ್ ಗಿಲ್ ಔಟ್: ಟೀಮ್ ಇಂಡಿಯಾದಲ್ಲಿ ಬದಲಾವಣೆ ಖಚಿತ




