Railway Recruitment 2025 : ದೇಶಾದ್ಯಂತ ವಿವಿಧ ಕ್ಲಸ್ಟರ್ಗಳಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಉತ್ತರ ರೈಲ್ವೆ ಬಿಡುಗಡೆ ಮಾಡಿದೆ.

ಉತ್ತರ ರೈಲ್ವೆ (RRC) ದೇಶದಾದ್ಯಂತ ವಿವಿಧ ಕ್ಲಸ್ಟರ್ಗಳಲ್ಲಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಈ ಅಧಿಸೂಚನೆಯಡಿ ಒಟ್ಟು 4,116 ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದ್ದು, ಅರ್ಜಿಗಳು ನವೆಂಬರ್ 25ರಿಂದ Online ಮೂಲಕ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕ್ಲಸ್ಟರ್ವಾರು ಹುದ್ದೆಗಳ ವಿವರ
- ಲಕ್ನೋ: 1,397
- ದೆಹಲಿ: 1,137
- ಫಿರೋಜ್ಪುರ: 632
- ಅಂಬಾಲಾ: 934
- ಮೊರಾದಾಬಾದ್: 16
ಇದನ್ನು ಓದಿ : BBK S12 : ಗಿಲ್ಲಿ ವಿರುದ್ಧ ಮಸಲತ್ತು ಆರಂಭಿಸಿದ ಸ್ಪಂದನಾ ??
ಈ ಹುದ್ದೆಗಳನ್ನು ಟ್ರೇಡ್, ಮೆಡಿಕಲ್, ಎಲೆಕ್ಟ್ರಿಷಿಯನ್, ಫಿಟ್ಟರ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಕಾರ್ಪೆಂಟರ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಭರ್ತಿ ಮಾಡಲಾಗುತ್ತದೆ. 10ನೇ ತರಗತಿ ಹಾಗೂ ITI ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ
ಡಿಸೆಂಬರ್ 24, 2025ರಂತೆ 15 ರಿಂದ 24 ವರ್ಷ. ಮೀಸಲಾತಿಗೆ ಅನ್ವಯಿಸುವಂತೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಅಭ್ಯರ್ಥಿಗಳು ಡಿಸೆಂಬರ್ 24ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಗೆ ₹100 ಶುಲ್ಕ ನಿಗದಿಯಾಗಿದೆ. ಯಾವುದೇ ಲಿಖಿತ ಪರೀಕ್ಷೆಯಿಲ್ಲದೇ, ಶೈಕ್ಷಣಿಕ ಅರ್ಹತೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ ಮಾಸಿಕ ಸ್ಟೈಪೆಂಡ್ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.
ಇದನ್ನು ನೋಡಿ : ವಾರ್ಡ್ಗಳ ಮರು ವಿಂಗಡಣೆಗೆ ಅಧಿಸೂಚನೆ ಬಂದಾಯ್ತು- ಯಾವಾಗ ಗ್ರೇಟರ್ ಬೆಂಗಳೂರು ಎಲೆಕ್ಷನ್ ಗೊತ್ತಾ..?




