Greater Bengaluru : ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವ ಬಂದ ಬಳಿಕ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ಇದೀಗ ವಾರ್ಡ್ಗಳ ಮರು ವಿಂಗಡಣೆಗೆ ಅಧಿಸೂಚನೆಯನ್ನು ಪ್ರಕಟಿಸಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವ ಬಂದ ಬಳಿಕ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ಇದೀಗ ವಾರ್ಡ್ಗಳ ಮರು ವಿಂಗಡಣೆಗೆ ಅಧಿಸೂಚನೆಯನ್ನು ಪ್ರಕಟಿಸಿದೆ. ಅಧಿಸೂಚನೆ ಪ್ರಕಾರ ವಾರ್ಡ್ಗಳ ಮರು ವಿಂಗಡಣೆಯಿಂದಾಗಿ ವಾರ್ಡ್ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ವಾರ್ಡ್ಗಳ ಮರು ವಿಂಗಡಣೆಗೆ ಅಧಿಸೂಚನೆ ಪ್ರಕಟ
ಸೆಫ್ಟೆಂಬರ್ 2 ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಿಬಿಎ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್ ವಿಂಗಡಣಾ ಆಯೋಗ ರಚನೆ ಮಾಡಲಾಗಿತ್ತು. ಇದೀಗ ವಾರ್ಡ್ಗಳ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನಯ ರಾಜ್ಯ ಸರ್ಕಾರ ಪ್ರಕಟಿಸಿದ್ದು, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆಯನ್ನು ಹೊರಡಿಸಿದೆ.
ಇದನ್ನು ಓದಿ : ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಅನಿಲ್ ಕುಂಬ್ಳೆ ವಿಸಿಟ್
ಬೆಂಗಳೂರು ಪ. ನಗರ ಪಾಲಿಕೆಯಲ್ಲಿ 112ಕ್ಕೆ ವಾರ್ಡ್ ಗಳ ಏರಿಕೆ
ಇನ್ನು ಆಯೋಗದ ವರದಿ ಆಧರಿಸಿ ಇಲಾಖೆಯು ಸೆಫ್ಟೆಂಬರ್ 30 ರಂದು ವಾರ್ಡ್ ಮರು ವಿಂಗಡಣೆಯ ಕರಡು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಈ ಸಂಬಂಧ 4 ಸಾವಿರ ಆಕ್ಷೇಪಣೆಗಳು ಸಲ್ಲಿಸಿದ್ದು, ಪರಿಶೀಲನೆ ಬಳಿಕ ಇದೀಗ ವಾರ್ಡ್ಗಳ ಸಂಖ್ಯೆಯನ್ನು ಅಂತಿಮಗೊಳಿಸಿದ್ದು, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ 111 ವಾರ್ಡ್ಗಳಿದ್ದು, ಅಂತಿಮ ಅಧಿಸೂಚನೆಯಲ್ಲಿ ವಾರ್ಡ್ಗಳ ಸಂಖ್ಯೆಯನ್ನು 112ಕ್ಕೇರಿಸಿದೆ.
ಇನ್ನುಳಿದ ನಗರ ಪಾಲಿಕೆಗಳ ವಾರ್ಡ್ಗಳ ಸಂಖ್ಯೆಯಲ್ಲಿ ಬದಲಾವಣೆಯಾಗಿಲ್ಲ ಎಂದು ಮೂಲಗಳು ತಿಳಿಸಿದ್ದು, ಐದು ನಗರ ಪಾಲಿಕೆಗಳಲ್ಲಿ 369 ವಾರ್ಡ್ಗಳು ಅಂತಿಮಗೊಂಡಿವೆ.
ಶೀಘ್ರವೇ ನಡೆಯಲಿದೆ ಗ್ರೇಟರ್ ಬೆಂಗಳೂರು ಚುನಾವಣೆ
ಸದ್ಯ ಗ್ರೇಟರ್ ಬೆಂಗಳೂರು ವಾರ್ಡ್ಗಳ ಮರು ವಿಂಗಡಣೆ ಅಂತಿಮಗೊಂಡಿದ್ದು, ಸೆಫ್ಟೆಂಬರ್ 10, 2020ರಿಂದ ಪಾಲಿಕೆ ಚುನಾವಣೆ ನಡೆಸಲು ಅಡಚಣೆಯನ್ನು ಪಾಲಿಕೆ ತೆರವುಗೊಳಿಸಿದ್ದು, ಅತಿ ಶೀಘ್ರವೇ ಗ್ರೇಟರ್ ಬೆಂಗಳೂರಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಇದನ್ನು ನೋಡಿ : ಚಿ.ನಾ.ಹಳ್ಳಿಯಲ್ಲಿ ನಕಲಿ ಸಹಿ ಕೇಸ್ – 32 ರೈತರ ವಿರುದ್ಧ FIR ದಾಖಲು




