Tumakuru : ಯುದ್ಧದ ನಡುವೆ ದಾಖಲೆ ಬರೆದ ಕೊಬ್ಬರಿ ಬೆಲೆ

ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ಗ್ಯಾಸ್ ಕೊರತೆ ಹೆಚ್ಚಾಗುತ್ತಿದ್ರೆ, ಇತ್ತ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಮಧ್ಯೆ ಕೊಬ್ಬರಿ ಬೆಲೆ ಗಗನಕ್ಕೇರುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಹೌದು ತುಮಕೂರಿನಲ್ಲಿ ಕೊಬ್ಬರಿ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ.
32 ಸಾವಿರದಿಂದ 38 ಸಾವಿರಕ್ಕೆ ಜಿಗಿತ
ಕಲ್ಪತರು ನಾಡು Tumakuru ನರದಲ್ಲಿ ಉಂಡೆ ಕೊಬ್ಬರಿ ದರ ದಾಖಲೆ ಬರೆದಿದ್ದು, ಕ್ವಿಂಟಾಲ್ ಕೊಬ್ಬರಿ 38 ಸಾವಿರ ರೂಪಾಯಿ ಆಗಿದೆ. ಕಳೆದ ವರ್ಷ ಜೂನ್ 30 ರಂದು ನಡೆದ ಹರಾಜಿನಲ್ಲಿ ಕ್ವಿಂಟಲ್ ಕೊಬ್ಬರಿ 31 ಸಾವಿರದ 606 ರೂಪಾಯಿ ಇದ್ದು, ದಾಖಲೆ ಮಾಡಿತ್ತು. ಬಳಿಕ ಕಳೆದ ಕೆಲ ತಿಂಗಳ ಹಿಂದೆ ಕ್ವಿಂಟಾಲ್ ಕೊಬ್ಬರಿ 32 ಸಾವಿರ ಇದ್ದು ಇದೀಗ 32 ಸಾವಿರದಿಂದ 38 ಸಾವಿರಕ್ಕೆ ಏಕಾಏಕಿ ದರ ಜಿಗಿದಿದ್ದು, ಹೊಸ ದಾಖಲೆಯನ್ನೇ ಬರೆದಿದೆ.
READ THIS : BREAKING|ಶಾಸಕ ವಿನಯ್ ಕುಲಕರ್ಣಿ ಸೇರಿ ಎಲ್ಲಾ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಮಾರುಕಟ್ಟೆಯಲ್ಲಿ ಕೊಬ್ಬರಿ ಸಂಗ್ರಹಣೆ ಕಡಿಮೆ
ಇನ್ನು ಕೊಬ್ಬರಿ ಬೆಲೆ ಏರಿಕೆಯಾಗುತ್ತಿರುವುದು ತೆಂಗು ಬೆಳೆಗಾರರು ಸಂತಸ ವ್ಯಕ್ತಪಡಿಸ್ತಾ ಇದ್ರೆ, ರೈತರ ಕೊಬ್ಬರಿ ದಾಸ್ತಾನು ಇಲ್ಲವಾಗಿದೆ. ಮಾರುಕಟ್ಟೆಯಲ್ಲಿ ಕೊಬ್ಬರಿ ಸಂಗ್ರಹಣೆ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ದಿನದಿಂದ ದಿನಕ್ಕೆ ಕೊಬ್ಬರಿ ದರ ಏರಿಕೆ
ಇನ್ನು ಈ ವರ್ಷದ ಆರಂಭದಲ್ಲೇ ಕ್ವಿಂಟಾಲ್ ಕೊಬ್ಬರಿ ಬೆಲೆ 31 ಸಾವಿರ ದಾಟುವ ಮೂಲಕ ಬೆಲೆ ಏರಿಕೆ ಸುಳಿವು ನೀಡಿತ್ತು. 30 ಸಾವಿರದಿಂದ 31ರ ಸಾವಿರದ ನಡುವೆ ಮಾರಾಟ ವಾಗುತ್ತಿದ್ದ ಕೊಬ್ಬರಿ ಇದೀಗ 38 ಸಾವಿರ ರೂಪಾಯಿ ದಾಟಿದೆ.
ಮಾರುಕಟ್ಟೆಯಲ್ಲಿ ಎಳನೀರಿಗೆ ಉತ್ತಮ ಬೆಲೆ ಸಿಗುತ್ತಿದ್ದು, ಬಹಳಷ್ಟು ರೈತರು ಎಳನೀರು ಮಾರಾಟ ಮಾಡುತ್ತಿದ್ದಾರೆ. ತೆಂಗಿನಕಾಯಿ ಇಳುವರಿ ಕಡಿಮೆ ಆಗಿದ್ದು, ತೆಂಗಿನಕಾಯಿ ಒಣಗಿಸಿ ಕೊಬ್ಬರಿ ಮಾಡುವುದು ಕಡಿಮೆಯಾಗುತ್ತಿದೆ.
ಇದ್ರಿಂದ ಕೊಬ್ಬರಿ ಉತ್ಪಾದನೆ ಗಣನೀಯವಾಗಿ ಇಳಿದಿದೆ. ಹಾಗಾಗಿ ದಿನದಿಂದ ದಿನಕ್ಕೆ ಕೊಬ್ಬರಿ ದರ ಏರಿಕೆ ಆಗಲು ಪ್ರಮುಖ ಕಾರಣವಾಗಿದೆ.

MUST WATCH : 1 ತಿಂಗಳಲ್ಲಿ ನಂಜುಡೇಶ್ವರ ಕೋಟ್ಯಾಧೀಶ್ವರ – ಹುಂಡಿ ಎಣಿಕೆ ಕಾರ್ಯದಲ್ಲಿ ಸಿಕ್ಕಿದ್ದೇನು..?




