Tumkur : ನವಿಲುಗಳ ಸರಣಿ ಸಾವು – ಹೀಟ್ ಸ್ಟ್ರೋಕ್ನಿಂದ ಸಾವನ್ನಪ್ಪಿದ್ವಾ ನವಿಲುಗಳು.?

ರಾಜ್ಯಾದ್ಯಂತ ದಿನೇ ದಿನೇ ತಾಪಮಾನ ಹೆಚ್ಚಾಗ್ತಿದ್ದು, ಹೀಟ್ ಸ್ಟ್ರೋಕ್ ಹೆಚ್ಚಾಗಿದೆ. ತಾಪಮಾನ ಹೆಚ್ಚಳದಿಂದಾಗಿ ಜನರು, ಪ್ರಾಣಿ ಪಕ್ಷಿಗಳು ತತ್ತರಿಸಿ ಹೋಗಿವೆ. ಇತ್ತ Tumkur ಜಿಲ್ಲೆಯಲ್ಲೂ ಉಷ್ಣಾಂಶ ಹೆಚ್ಚಾಗ್ತಾ ಇದ್ದು, ಮಳೆ ಮೋಡ ಆದ್ರು ಮಳೆ ಮಾತ್ರ ಆಗ್ತಾ ಇಲ್ಲ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗ್ತಾ ಇದೆ. ಉಷ್ಣಾಂಶ ಹೆಚ್ಚಳದಿಂದಾಗಿಯೇ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ 40ಕ್ಕೂ ಹೆಚ್ಚು ನವಿಲುಗಳು ಸಾವನ್ನಪ್ಪಿರುವುದು ಪರಿಸರ ಪ್ರೇಮಿಗಳಲ್ಲಿ ಆತಂಕ ಶುರುವಾಗಿದೆ.

READ THIS : SSLC ಪರೀಕ್ಷೆಯಲ್ಲಿ ಕಲಬುರಗಿಗೆ ಕೊನೇ ಸ್ಥಾನ - ಖರ್ಗೆ ಗುರಿಯಾಗಿಸಿ ಬಿಜೆಪಿ, ಜೆಡಿಎಸ್ ವ್ಯಂಗ್ಯ
ನವಿಲುಗಳ ಸರಣಿ ಸಾವು
ತುಮಕೂರು ತಾಲೂಕಿನ ಊರ್ಡಿಗೆರೆ, ಗುಳೂರು, ಬೊಮ್ಮನಹಳ್ಳಿ ಹಾಗೂ ಟಿ.ಜಿ. ಪಾಳ್ಯದ ಸುತ್ತಮುತ್ತ ಪ್ರದೇಶದಲ್ಲಿ ನವಿಲುಗಳ ಕಳೇಬರ ಪತ್ತೆಯಾಗಿವೆ. ಏಪ್ರಿಲ್ 16 ರಂದು ಒಂದೇ ದಿನ 11 ನವಿಲುಗಳು ಪ್ರಾಣ ಬಿಟ್ಟಿದ್ರೆ, ಏಪ್ರಿಲ್ 20 ರಂದು 11, ಏಪ್ರಿಲ್ 21 ರಂದು ಮತ್ತೆ 10 ನವಿಲುಗಳು ದಾರುಣವಾಗಿ ಸಾವನ್ನಪ್ಪಿದೆ. ಸದ್ಯ ತುಮಕೂರು ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ವಿಷಪ್ರಯೋಗ ಅಥವಾ ನೀರಿನ ಅಭಾವದಿಂದ ಸಾವು ಸಂಭವಿಸಿರುವ ಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

ಹೀಟ್ ಸ್ಟ್ರೋಕ್ನಿಂದ ಸಾವನ್ನಪ್ಪಿದ್ವಾ ನವಿಲುಗಳು.?
ಇನ್ನು ಈ ಬಾರಿ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚಾಗಿದ್ದು. ಬಿಸಿಲಿನಿಂದ ಹೀಟ್ ಸ್ಟ್ರೋಕ್ ಕಾರಣ ಆಗಿರಬಹುದಾ ಅಥವಾ ಉರಿ ಬಿಸಿಲಿನ ನಡುವೆ ಯಾವುದಾದ್ರೂ ಮಾರಣಾಂತಿಕ ಕಾಯಿಲೆ ಹರಡಿದೆಯಾ ಎಂಬ ಶಂಕೆ ವ್ಯಕ್ತವಾಗ್ತಿದೆ. ಸದ್ಯ ನವಿಲುಗಳ ಅಂಗಾಂಗಗಳ ಮಾದರಿಯನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರವೇ ನವಿಲುಗಳ ಸಾವಿನ ಹಿಂದಿನ ಅಸಲಿ ಕಾರಣ ಹೊರಬರಲಿದೆ.
MUST WATCH : ರಾಜ್ಯದಲ್ಲಿ HEAT STROKE ಭೀತಿ..!? ತುಮಕೂರಿನಲ್ಲೂ ರಣ ರಣ ಅಂತಿದೆ ಬಿಸಿಲು




