Mysuru ಸಿದ್ಧಾರ್ಥ್ ನಗರದಲ್ಲಿ ಮನೆಗೆ ನುಗ್ಗಿದ ಚಿರತೆ ಆತಂಕ ಸೃಷ್ಟಿಸಿತು. ಈ ವೇಳೆ ಸೊಸೆ ಸಮಯಪ್ರಜ್ಞೆಯಿಂದ ಅತ್ತೆಯನ್ನು ರಕ್ಷಿಸಿದ ಘಟನೆ ನಡೆದಿದೆ.

ಮೈಸೂರಿನ Mysuru ನಗರದಲ್ಲಿ ಅಚ್ಚರಿ ಮೂಡಿಸುವ ಘಟನೆ ನಡೆದಿದೆ. ಸಿದ್ಧಾರ್ಥ್ ನಗರದಲ್ಲಿರುವ ಒಂದು ಮನೆಗೆ ಹಾಡಹಗಲೇ ಚಿರತೆ ನುಗ್ಗಿದ್ದು, ಮನೆಯವರಲ್ಲಿ ಆತಂಕ ಸೃಷ್ಟಿಸಿತು.
ಅತ್ತೆ–ಸೊಸೆ ಮನೆಯಲ್ಲಿ ಇರುವಾಗಲೇ ಚಿರತೆ ಪ್ರವೇಶ
ಸಿದ್ಧಾರ್ಥ್ ನಗರದ ಸುರೇಶ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಆ ಸಮಯದಲ್ಲಿ ಅವರ ಪತ್ನಿ ಸುಜಾತ ಹಾಗೂ ತಾಯಿ ಶೈಲಜಾ ಮನೆಯಲ್ಲಿದ್ದರು.
ಈ ವೇಳೆ ಚಿರತೆ ನೇರವಾಗಿ ಶೈಲಜಾ ಮಲಗಿದ್ದ ಕೊಠಡಿಗೆ ಪ್ರವೇಶಿಸಿದ್ದು, ಪರಿಸ್ಥಿತಿ ಗಂಭೀರವಾಗಿತ್ತು. ಆದರೆ, ಸೊಸೆ ಸುಜಾತ ಸಮಯಪ್ರಜ್ಞೆ ಪ್ರದರ್ಶಿಸಿ ಅತ್ತೆಯನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದು ದೊಡ್ಡ ಅನಾಹುತವನ್ನು ತಪ್ಪಿಸಿದರು.
MUST READ : ಬೆಂಗಳೂರು-ಪುಣೆಗೆ ಬರುತ್ತಿದೆ ‘ Vande Bharat Sleeper ’..!!
ಅರಣ್ಯ ಇಲಾಖೆ ಕಾರ್ಯಾಚರಣೆ
ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಬಳಿಕ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಹಿಡಿದು ಮತ್ತೆ ಕಾಡಿಗೆ ಬಿಡಲಾಗಿದೆ.
ಈ ಘಟನೆ ಸ್ಥಳೀಯರಲ್ಲಿ ಕೆಲಕಾಲ ಭೀತಿ ಉಂಟುಮಾಡಿದರೂ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನಕರ ವಿಷಯವಾಗಿದೆ.
MUST WATCH : ಸಿದ್ದು ಟೀಂ ಡಿಕೆ ಟೀಂ ಅಂತಾ ಏನು ಇಲ್ಲ ಡಿಕೆ ಒಗ್ಗಟ್ಟಿನ ಮಂತ್ರ ಹೇಳ್ತಾ ಇರೋದ್ಯಾಕೆ




