Bengaluru Crime News : ಸ್ಯಾಂಡಲ್ವುಡ್ ನಟಿ ಆಶಿಕಾ ರಂಗನಾಥ್ ಸಂಬಂಧಿಯಾದ ಅಚಲ, ಪ್ರೇಮಿಯಿಂದ ಮಾನಸಿಕ ಹಾಗೂ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ. ಮಯಾಂಕ್ ಮತ್ತು ತಾಯಿ ಇಂದ FIR ದಾಖಲೆ.

Bengaluru Crime News : ಸ್ಯಾಂಡಲ್ವುಡ್ ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿಯಾದ ಯುವತಿ, ಪ್ರೇಮಿಯಿಂದ ಲೈಂಗಿಕ ಮತ್ತು ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಘಟನೆ ನವೆಂಬರ್ 22ರಂದು ಪಾಂಡುರಂಗನಗರದಲ್ಲಿ ನಡೆಯಿದ್ದು,
ಈಗ ತಡವಾಗಿ ಬೆಳಕಿಗೆ ಬಂದಿದೆ. ಮೃತ ಯುವತಿಯ ತಂದೆಯ ದೂರಿನ ಮೇರೆಗೆ ಆರೋಪಿಗಳಾದ ಯುವಕ ಮತ್ತು ಆತನ ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ.
ಯುವತಿಯ ಆತ್ಮಹತ್ಯೆ ಪ್ರಕರಣ ತಡವಾಗಿ ಬೆಳಕಿಗೆ
ಹಾಸನ ಮೂಲದ 22 ವರ್ಷದ ಅಚಲ, ಬೆಂಗಳೂರಿನ ಪಾಂಡುರಂಗನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಘಟನೆ ನಡೆದ 10 ದಿನಗಳಾದರೂ ಪೊಲೀಸರು ಕ್ರಮ ಕೈಗೊಳ್ಳದಿರುವುದಕ್ಕೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರೀತಿಯ ನೆಪದಲ್ಲಿ ಲೈಂಗಿಕ ಸಂಪರ್ಕಕ್ಕೆ ಒತ್ತಡ
ಅಚಲ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರುವ ಹಂತದಲ್ಲಿದ್ದರು. ಈ ವೇಳೆಯಲ್ಲಿ ದೂರದ ಸಂಬಂಧಿಯಾದ ಮಯಾಂಕ್ ಜೊತೆ ಆಕೆ ಸ್ನೇಹ ಬೆಳೆಸಿಕೊಂಡಿದ್ದರು. ಮದುವೆಯಾಗುವ ಭರವಸೆ ನೀಡಿ, ಮಯಾಂಕ್ ಆಕೆಯನ್ನು ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ. ಒಪ್ಪದಿದ್ದಾಗ ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ನಿಯಂತ್ರಣ ಹೇರಿಕೆ ನಡೆಸುತ್ತಿದ್ದಾನೆಂದು ಕುಟುಂಬಸ್ಥರು ಹೇಳಿದ್ದಾರೆ.
ಮತ್ತೊಬ್ಬ ಯುವತಿಯೊಂದಿಗೆ ಸಂಬಂಧದಿಂದ ಮನಸ್ತಾಪ
ಡ್ರಗ್ ಅಡಿಕ್ಟ್ ಆಗಿರುವ ಮಯಾಂಕ್ನಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದ ಅಚಲ, ಆತ ಇನ್ನೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿರುವುದು ತಿಳಿದು ಮಾನಸಿಕವಾಗಿ ಕುಗ್ಗಿದ್ದರು. ಈ ಆಘಾತದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಕುಟುಂಬ ಸದಸ್ಯರ ಆರೋಪ.
ಮಯಾಂಕ್ ಮತ್ತು ತಾಯಿ ಇಂದ FIR ದಾಖಲೆ
ಘಟನೆಯ ಸಂಬಂಧ ಮಯಾಂಕ್ ಮತ್ತು ಅವನ ತಾಯಿ ಮೈನಾ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಅಚಲದ ಪೋಷಕರು ಆಗ್ರಹಿಸಿದ್ದಾರೆ.
ಪ್ರಾಣ ಕೊಡುವ ಮೊದಲು ಕಳಿಸಿದ ಹೃದಯವಿದ್ರಾವಕ ಸಂದೇಶಗಳು
ಆತ್ಮಹತ್ಯೆಗೆ ಮುನ್ನ ಅಚಲ ಮಯಾಂಕ್ಗೆ ಕಳುಹಿಸಿದ ಸಂದೇಶದಲ್ಲಿ ತನ್ನ ನೋವನ್ನು ಹೀಗೆ ವ್ಯಕ್ತಪಡಿಸಿದ್ದರು:
- “ನಿನ್ನ ಬಿಟ್ಟು ಬದುಕಲು ಸಾಧ್ಯವಿಲ್ಲ.”
- “ನನ್ನ ಕನಸುಗಳನ್ನು ನೀನು ನುಚ್ಚುನೂರು ಮಾಡಿದ್ದೀಯ.”
- “ನೀನು ಮೋಸ ಮಾಡಿಲ್ಲ ಅಂದ್ರೆ ರಾಘವೇಂದ್ರ ಸ್ವಾಮಿ ಮೇಲೆ ಆಣೆ ಮಾಡು.”
- “ನನ್ನನ್ನು ಬ್ಲಾಕ್ ಮಾಡಬೇಡ.”
ಈ ಸಂದೇಶಗಳಿಂದ ಆಕೆಯ ಮನದಾಳದ ವ್ಯಥೆ ಸ್ಪಷ್ಟವಾಗುತ್ತದೆ.




