Bengaluru : ಆಸ್ತಿ ವಿವಾದ ಹಿನ್ನೆಲೆ ಮೆನೆಗೆ ಬೆಂಕಿ ಹಚ್ಚಲು ಯತ್ನ – ತಮ್ಮನ ಮನೆಗೆ ಬೆಂಕಿ ಹಚ್ಚಲು ಮುಂದಾದ ಅಕ್ಕ.

Bengaluru : ಕೌಟುಂಬಿಕ ಕಲಹ ಹಾಗೂ ಆಸ್ತಿ ವಿವಾದ ಹಿನ್ನೆಲೆ ಸ್ವಂತ ಅಣ್ಣನ ಮನೆಗೆ ಸ್ವಂತ ಅಕ್ಕನೇ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿರುವ ಭಯಾನಕ ಘಟನೆ ಬೆಂಗಳೂರಿನ ಜಯನಗರದ ಭೈರಸಂದ್ರದಲ್ಲಿ ನಡೆದಿದೆ.
ತಮ್ಮನ ಮನೆಗೆ ಬೆಂಕಿ ಹಚ್ಚಲು ಮುಂದಾದ ಅಕ್ಕ
ಕುಟುಂಬದವರ ನಡುವೆ ಆಸ್ತಿ ವಿವಾದ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಅಕ್ಕ ಮೀನಾಕ್ಷಿ, ಆಕೆಯ ಗಂಡ ಹಾಗೂ ಆಕೆಯ ಮಕ್ಕಳು ಸಹೋದರ ಉಮೇಶ್ ಮನೆ ಬಳಿ ಬಂದು, ಕಲ್ಲು, ದೊಣ್ಣೆಗಳಿಂದ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮನೆ ಮೇಲೆ ದಾಳಿ ಮಾಡಿದ್ದ ಅಲ್ಲದೇ ಬಾಗಿಲು ತೆಗೆಯುವಂತೆ ಕೂಗಾಡಿದ್ದಾರೆ. ಬಳಿಕ ಸಿಸಿ ಕ್ಯಾಮೆರಾವನ್ನು ಪುಡಿ ಪುಡಿ ಮಾಡಿದ್ದು, ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
READ THIS : ಇರಾನ್ಗೆ ವಾರ್ನಿಂಗ್ ಕೊಟ್ಟ ಡೊನಾಲ್ಡ್ ಟ್ರಂಪ್..!

Bengaluru – ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಅಕ್ಕ ಮೀನಾಕ್ಷಿ ದಾಳಿಯಿಂದಾಗಿ ಮನೆಯ ಕಿಟಕಿಯ ಗಾಜುಗಳು ಪುಡಿ ಪುಡಿಯಾಗಿವೆ. ಸಹೋದರಿಯ ಕೃತ್ಯಕ್ಕೆ ಮನೆ ಮಂದಿ ಬೆಚ್ಚಿಬಿದ್ದಾರೆ. ಉಮೇಶ್ ಅವರ ಪತ್ನಿ ಅಶ್ವಿನಿ ತಕ್ಷಣ 112ಕ್ಕೆ ಕರೆ ಮಾಡಿ ಪೊಲೀಸರ ಸಹಾಯ ಕೇಳಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

MUST WATCH : ತುಮಕೂರಿನಲ್ಲಿ ಕೆರೆಯ ನೀರಿಗಾಗಿ ಸಮರ – RAJANNA ನೇತೃತ್ವದ ಹೋರಾಟ ಸಕ್ಸಸ್




