Bengaluru : ಬ್ರೈನ್ ಸ್ಟ್ರೋಕ್ – 25ರ ಯುವತಿ ಸಾವು

ತಾಯಿ ಜೊತೆ ನಗುನಗುತ್ತಾ ಮಾತನಾಡುತ್ತಿರುವಾಗಲೇ ಬ್ರೈನ್ ಸ್ಟ್ರೋಕ್ ಆಗಿ ಚಿಕಿತ್ಸೆ ಫಲಕಾರಿಯಾಗದೇ ಟೆಕ್ಕಿ ಯುವತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹಾಸನ ಮೂಲದ ಶ್ವೇತ (25) ಮೃತ ಯುವತಿ.
ಬ್ರೈನ್ ಸ್ಟ್ರೋಕ್ಗೆ ಯುವತಿ ಬಲಿ
ಶ್ವೇತಾ, ಶನಿವಾರ ಕೆಲಸ ಮುಗಿಸಿ ಮನೆಗೆ ಬಂದ ನಂತರ ತಾಯಿಯೊಂದಿಗೆ ಮಾತನಾಡುತ್ತಿದ್ದಳು. ಈ ವೇಳೆ ಏಕಾಏಕಿ ಕುಸಿದು ಬಿದ್ದು ಮಾತನಾಡಲಾಗದ ಸ್ಥಿತಿಗೆ ತಲುಪಿದರು. ತಕ್ಷಣವೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಕೋಮಾಗೆ ತಲುಪಿದ್ದರು.
READ THIS : ಹೆಲ್ಮೆಟ್ ಧರಿಸಿ ಬಂದು ಸಿಲಿಂಡರ್ ಎಗರಿಸಿದ ಚಾಲಾಕಿ ಕಳ್ಳ..!

Bengaluru – ಶ್ವೇತಾಳ ಮೃತದೇಹವನ್ನು ಹಾಸನಕ್ಕೆ ರವಾನೆ
ದುಃಖದ ಮಧ್ಯೆಯೇ ಬ್ರೈನ್ ನಿಷ್ಕ್ರಿಯಗೊಂಡಿದ್ದರಿಂದ ಪೋಷಕರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಶ್ವೇತಾ ಮೃತಪಟ್ಟಿದ್ದಾರೆ. ಹೀಗಾಗಿ ಅಂಗಾಂಗ ದಾನ ನಡೆಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಒಬ್ಬಳೇ ಪುತ್ರಿಯನ್ನು ಕಳೆದುಕೊಂಡ ಪೋಷಕರು ಕಂಗಾಲಾಗಿದ್ದು, ಶ್ವೇತಾಳ ಮೃತದೇಹವನ್ನು ಹಾಸನಕ್ಕೆ ಕೊಂಡೊಯ್ಯಲಾಗಿದೆ.
ಯಾವುದೇ ಗುಣಲಕ್ಷಣಗಳಿಲ್ಲದೇ ಆರೋಗ್ಯವಾಗಿದ್ದ ಶ್ವೇತ ಬ್ರೈನ್ ಸ್ಟ್ರೋಕ್ಗೆ ಬಲಿಯಾದ ಘಟನೆ ಆತಂಕ ಮೂಡಿಸಿದೆ.

MUST WATCH : ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಮಹಿಳೆ ವಿರುದ್ಧ ಅವಹೇಳನ ಪೋಸ್ಟರ್




