Winter Session 2025 : ನಾಳೆಯಿಂದ ಸಂಸತ್ನ (Parliament) ಚಳಿಗಾಲದ ಅಧಿವೇಶನ (Winter Session) ಆರಂಭವಾಗಲಿದೆ. ಸಂಸತ್ತಿನ ಚಳಿಗಾಲದ ಅಧಿವೇಶನವು ನಾಳೆಯಿಂದ ಪ್ರಾರಂಭವಾಗಿ ಡಿಸೆಂಬರ್ 19 ರವರೆಗೆ ನಡೆಯಲಿದೆ.

Winter Session 2025: ಸಂಸತ್ನ ಚಳಿಗಾಲದ ಅಧಿವೇಶನವು ನಾಳೆಯಿಂದ ಪ್ರಾರಂಭವಾಗಿ ಡಿಸೆಂಬರ್ 19ರವರೆಗೆ ನಡೆಯಲಿದೆ. ಒಟ್ಟು 19 ದಿನಗಳ ಅವಧಿಯಲ್ಲಿ 15 ಕಲಾಪಗಳು ನಡೆಯಲಿವೆ.
ಸಂಸತ್ ಚಳಿಗಾಲ ಅಧಿವೇಶನ — ಡಿಸೆಂಬರ್ 1ರಿಂದ 19ರವರೆಗೆ
ಡಿಸೆಂಬರ್ 5 ಮತ್ತು 19ರಂದು ಖಾಸಗಿ ಸದಸ್ಯರ ಮಸೂದೆಗಳು ಹಾಗೂ ಡಿ. 12ರಂದು ಖಾಸಗಿ ಸದಸ್ಯರ ನಿರ್ಣಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಬಾರಿಯ ಅಧಿವೇಶನದಲ್ಲಿ ಹಲವು ಪ್ರಮುಖ ಶಾಸನ ಹಾಗೂ ಹಣಕಾಸು ವ್ಯವಹಾರಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ತಯಾರಿ ನಡೆಸಿದೆ.
ರಾಷ್ಟ್ರಪತಿಯವರ ಶಿಫಾರಸಿನ ಮೇರೆಗೆ ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ, ಮಣಿಪುರ GST (2ನೇ ತಿದ್ದುಪಡಿ) ಮಸೂದೆ, ಮತ್ತು ಕೇಂದ್ರೀಯ ಅಬಕಾರಿ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಮಹತ್ವದ ಮಸೂದೆಗಳನ್ನು ಮಂಡಿಸಲಾಗಲಿದೆ.
ಸರ್ವಪಕ್ಷ ಸಭೆ ನಂತರದ ಪ್ರಸ್ತಾವನೆಗಳು
ಅಧಿವೇಶನದ ಹಿನ್ನೆಲೆ ಇಂದು ಆಡಳಿತರೂಢ ಎನ್ಡಿಎ ಸರ್ಕಾರ ಸರ್ವಪಕ್ಷೀಯ ಸಭೆ ನಡೆಸಿ ಅಧಿವೇಶನವನ್ನು ಸುಗಮವಾಗಿ ನಡೆಸಲು ಸಹಕಾರ ಕೋರೆದಿದೆ. ಇತ್ತ ವಿರೋಧಪಕ್ಷಗಳು ತಮ್ಮ ತಂತ್ರ ರೂಪಿಸಿವೆ.
ನಾಳೆ ಸಂಸತ್ತಿನಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಇಂಡಿಯಾ ಮೈತ್ರಿಕೂಟದ ಶಾಸಕರ ಸಭೆ ನಡೆಯಲಿದೆ.
ಇದನ್ನೂ ಓದಿ : Newdelhi | ಡಿಸೆಂಬರ್ 1ರಿಂದ 19ರವರೆಗೆ ಸಂಸತ್ ಚಳಿಗಾಲದ ಅಧಿವೇಶನ..!
ಮತದಾರರ ಪಟ್ಟಿಗಳ ತಿದ್ದುಪಡಿ ಮತ್ತು ದೇಶದ ಭದ್ರತೆ ಜತೆ ಚರ್ಚೆಗೆ ಒತ್ತಾಯ
ವಿರೋಧಪಕ್ಷಗಳು ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ಮಧ್ಯಸ್ಥಿಕೆ ಕುರಿತು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಚೀನಾದೊಂದಿಗಿನ ವ್ಯಾಪಾರ ಸಮಸ್ಯೆಗಳು ಕುರಿತು ಚರ್ಚೆಗೆ ಒತ್ತಾಯಿಸುವ ಸಾಧ್ಯತೆ ಇದೆ. ಅಲ್ಲದೇ ದೆಹಲಿ ಸ್ಫೋಟ ಮತ್ತು ರಾಜಧಾನಿಯ ಮಾಲಿನ್ಯ ಕುರಿತೂ ಪ್ರಶ್ನೆಗಳು ಎದ್ದೇಳುವ ನಿರೀಕ್ಷೆ ಇದೆ.
MUST WATCH: WINTER SESSION | ಬೆಳಗಾವಿ ಅಧಿವೇಶನ ಯಾವಾಗಿಂದ..ಸರ್ಕಾರ- ವಿಪಕ್ಷಗಳ ವಿರುದ್ಧ ದಂಗೆ ಶುರು!




