Ind vs SA ODI : ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗಿರುವ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್, ರಾಂಚಿ ಪಂದ್ಯಕ್ಕೂ ಮುನ್ನ ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ.

IND vs SA ODI: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿರುವ ಟೀಂ ಇಂಡಿಯಾ ಇದೀಗ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿದೆ.
ನವೆಂಬರ್ 30 ರಂದು ರಾಂಚಿ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ಆರಂಭವಾಗಲಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಮರಳಿಕೆಯಿಂದ ಅಭಿಮಾನಿಗಳಲ್ಲಿ ಹೆಚ್ಚಿದ ಉತ್ಸಾಹ ಸ್ಪಷ್ಟವಾಗಿದೆ.
ಇದನ್ನೂ ಓದಿ: Cricket: ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ವೈಟ್ವಾಷ್- WTC ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿತ
ಕೆ.ಎಲ್. ರಾಹುಲ್ ಪ್ಲೇಯಿಂಗ್–11 ಕುರಿತು ಮಾಹಿತಿ
ದೀರ್ಘ ವಿರಾಮದ ಬಳಿಕ ಕೆಲ ಆಟಗಾರರು ತಂಡಕ್ಕೆ ಮರಳುತ್ತಿರುವುದರಿಂದ ಪ್ಲೇಯಿಂಗ್–11 ಹೇಗಿರಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಇನ್ನು ನಾಯಕ ಕೆ.ಎಲ್. ರಾಹುಲ್ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಸ್ಪಷ್ಟಪಡಿಸಿದರು.
ಆರನೇ ಕ್ರಮಾಂಕದಲ್ಲಿ ಆಡಲಿದ್ದಾರೆ ರಾಹುಲ್
ಸರಣಿಯಲ್ಲಿ ತಾನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಾಗಿ ರಾಹುಲ್ ತಿಳಿಸಿದ್ದಾರೆ. ಪಂತ್ ಪ್ಲೇಯಿಂಗ್–11 ನಲ್ಲಿ ವಿಕೆಟ್ಕೀಪರ್ ಆಗಿ ಆಡುತ್ತಾರೆ. ಬ್ಯಾಟ್ಸ್ಮನ್ ಆಗಿಯೂ ಅವರು ಆಡಬಹುದು, ಅಲ್ದೇ ವಿಕೆಟ್ ಕೀಪಿಂಗ್ ಜವಾಬ್ದಾರಿ ಅವರದ್ದೇ ಎಂದು ಹೇಳಿದರು.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಏಕದಿನ ಸರಣಿ ಪ್ರಾರಂಭ
ರುತುರಾಜ್ ರಾಂಚಿ ಏಕದಿನ ಪಂದ್ಯದಲ್ಲಿ ಆಡುತ್ತಾರೆಯೇ ಎಂಬುದನ್ನು ರಾಹುಲ್ ಖಚಿತಪಡಿಸಲಿಲ್ಲ. ಆದರೆ ಈ ಸರಣಿಯಲ್ಲಿ ರುತುರಾಜ್ಗೆ ಖಂಡಿತವಾಗಿಯೂ ಅವಕಾಶ ಸಿಗುತ್ತದೆ ಎಂದು ಭರವಸೆ ನೀಡಿದರು.
ರುತುರಾಜ್ ಗಾಯಕ್ವಾಡ್ ಒಬ್ಬ ಅದ್ಭುತ ಆಟಗಾರ. ಅವರು ಪಡೆದ ಕೆಲವೇ ಕೆಲವು ಅವಕಾಶಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಸರಣಿಯಲ್ಲಿ ಅವರಿಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ.
ಭಾರತ ಏಕದಿನ ತಂಡದಲ್ಲಿ ಕುತೂಹಲ
ನಾಳೆಯಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಭಾರತ ತಂಡದ ಹೇಗಿರುತ್ತದೆ ಎನ್ನುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
MUST WATCH: ಬೂಮ್ರಾ ಕರುಣ್ ನಾಯರ್ ಕಿತ್ತಾಟ -ಇಂಟರ್ ನೆಟ್ ನಲ್ಲಿ ನಿಲ್ತಿಲ್ಲ ಜಗಳ




