Cricket : ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸೋಲಿನೆ ಬೆನ್ನಲ್ಲೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಅಂಕ ಪಟ್ಟಿ ಬಿಡುಗಡೆಯಾಗಿದ್ದು, ಟೀಮ್ ಇಂಡಿಯಾ ಐದನೇ ಸ್ಥಾನಕ್ಕೆ ಕುಸಿದಿದೆ.

Cricket : ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೋಲಿನೊಂದಿಗೆ ಭಾರತ ತಂಡ ವೈಟ್ವಾಷ್ ಆಘಾತವನ್ನು ಅನುಭವಿಸಿದೆ. ಇದರ ಪರಿಣಾಮವಾಗಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಹೊಸ ಅಂಕಪಟ್ಟಿ ಬಿಡುಗಡೆಗೊಂಡಿದ್ದು, ಭಾರತ ಐದನೇ ಸ್ಥಾನಕ್ಕೆ ಇಳಿದಿದೆ.
ಹೊಸ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನವನ್ನು ಅಲಂಕರಿಸಿದೆ. 25 ವರ್ಷಗಳ ಬಳಿಕ ಭಾರತದಲ್ಲಿ ಐತಿಹಾಸಿಕ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ ತಂಡ ದ್ವಿತೀಯ ಸ್ಥಾನಕ್ಕೇರಿದ್ದು, 4 ಟೆಸ್ಟ್ಗಳಲ್ಲಿ 3 ಗೆಲುವು ಮತ್ತು 75% ಗೆಲುವಿನ ಸರಾಸರಿಯನ್ನು ಹೊಂದಿದೆ.
ಇದನ್ನೂ ಓದಿ: IND vs SA: ಭಾರತ vs ದಕ್ಷಿಣ ಆಫ್ರಿಕಾ: ಟೆಸ್ಟ್ ಸರಣಿಗೆ ಸಜ್ಜು..!
ಶ್ರೀಲಂಕಾ ತೃತೀಯ ಸ್ಥಾನದಲ್ಲಿ 66.67% ಗೆಲುವಿನ ಸರಾಸರಿಯೊಂದಿಗೆ ಮುಂದಿದೆ.

ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿ ಒಂದೊಂದು ಗೆಲುವು ಮತ್ತು ಸೋಲಿನೊಂದಿಗೆ 50% ಗೆಲುವಿನ ಶೇಕಡಾವನ್ನು ಹೊಂದಿದೆ. ಭಾರತ 9 ಪಂದ್ಯಗಳಲ್ಲಿ 4 ಗೆಲುವು, 1 ಡ್ರಾ ಮತ್ತು 4 ಸೋಲುಗಳು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಇಂಗ್ಲೆಂಡ್ ಆರನೇ ಸ್ಥಾನ, ಬಾಂಗ್ಲಾದೇಶ ಏಳನೇ, ವೆಸ್ಟ್ ಇಂಡೀಸ್ ಎಂಟನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ತಂಡ ಅಂಕಪಟ್ಟಿಯಲ್ಲಿ ಇನ್ನೂ ಅಂಕ ಪಡೆದಿಲ್ಲ. ಭಾರತ ತಂಡದ ಟಸ್ಟ್ ಅಭಿಯಾನ ಶುಭಮನ್ ಗಿಲ್ ನಾಯಕತ್ವದಲ್ಲಿ ಜೂನ್ನಲ್ಲಿ ಇಂಗ್ಲೆಂಡ್ ಪ್ರವಾಸದಿಂದ ಆರಂಭವಾಗಿತ್ತು.
ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಸೋತ ನಂತರ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಎರಡನೇ ಪಂದ್ಯದಲ್ಲಿ 408 ರನ್ಗಳ ಅಂತರದಿಂದ ಸೋತು ವೈಟ್ವಾಷ್ ಅನುಭವಿಸಿದೆ.
MUST WATCH: 14ನೇ ವರ್ಷಕ್ಕೆ ಐಪಿಎಲ್ ಗೆ ಪಾದಾರ್ಪಣೆ-ಮೊದಲ ಎಸೆತವನ್ನೇ ಸಿಕ್ಸರ್ ಗಟ್ಟಿದ ಪೋರ




