Lokayukta Raid : ಹಾಸನದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಸಂಚಾರಿ ದಳದ ಎಸಿಎಫ್.

Lokayukta Raid : ವನ್ಯಜೀವಿ ಅಪರಾಧಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಒಂದು ಪ್ರಕರಣದಲ್ಲಿ ಅನುಕೂಲ ಮಾಡಿಕೊಡುವ ನೆಪದಲ್ಲಿ ಹಣ ಪಡೆಯುತ್ತಿದ್ದ ಆರೋಪದ ಮೇಲೆ ಅರಣ್ಯ ಸಂಚಾರಿ ದಳದ ಎಸಿಎಫ್ ಸತೀಶ್ ಅವರು ಲೋಕಾಯುಕ್ತ ಬಲೆಯಲ್ಲಿ ಬಿದ್ದಿದ್ದಾರೆ.
ಫೋನ್ಪೇ ಮೂಲಕ ಲಂಚ ಪಡೆದ ಆರೋಪ
ಅರಸೀಕೆರೆ ಮೂಲದ ಜ್ಯೋತಿಷ್ಯ ಶಾಸ್ತ್ರ ಹೇಳುವ ಅಖಿಲೇಶ್ ಎಂಬುವವರ ಬಳಿ ಮೊದಲು ₹5,000 ಫೋನ್ಪೇ ಮೂಲಕ, ನಂತರ ಮತ್ತೊಮ್ಮೆ ₹10,000 ಫೋನ್ಪೇ ಹಣ ಪಡೆದುಕೊಂಡಿದ್ದಾರೆಯೆಂಬ ಆರೋಪ ವ್ಯಕ್ತವಾಗಿದೆ. ಜೊತೆಗೆ, ಇನ್ನೊಂದು ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ತಿಳಿಸಿ ಗೂಗಲ್ಪೇ ಮುಖಾಂತರ ಸಹ ಹಣ ಸ್ವೀಕರಿಸಿದ್ದಾರೆಯೆಂಬ ಮಾಹಿತಿ ಬೆಳಕಿಗೆ ಬಂದಿದೆ.
ಇದನ್ನು ಓದಿ : Mysuru|ಕೋಟಿ-ಕೋಟಿ ಒಡೆಯ ನಂಜುಂಡಪ್ಪ – ದಾಖಲೆ ಮಟ್ಟದಲ್ಲಿ ಕಾಣಿಕೆ ಸಂಗ್ರಹ!
ಸತೀಶ್ ಅವರನ್ನು ವಶಕ್ಕೆ ಪಡೆದ ಪೋಲೀಸರು
ತಡರಾತ್ರಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಹಾಸನದ ಗೆಂಡೆಕಟ್ಟೆ ಅರಣ್ಯ ಪ್ರದೇಶದಲ್ಲಿರುವ ಪ್ರವಾಸಿ ಮಂದಿರದಲ್ಲಿ ವಾಸವಾಗಿದ್ದ ಎಸಿಎಫ್ ಸತೀಶ್ ಅವರನ್ನು ವಶಕ್ಕೆ ಪಡೆದಿದ್ದಾರೆ. ರಾತ್ರೋ ರಾತ್ರಿ ನಡೆದ ದಾಳಿಯ ನಂತರ ಅಧಿಕಾರಿಗಳ ವಿಚಾರಣೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಡಿಜಿಟಲ್ ಪಾವತಿ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.
ಲೋಕಾಯುಕ್ತ ತನಿಖೆ ಚುರುಕು
ಕಳೆದ ರಾತ್ರಿಯಿಂದಲೇ ಲೋಕಾಯುಕ್ತ ತನಿಖೆ ಚುರುಕುಗೊಂಡಿದ್ದು, ಈ ಲಂಚವಹಿವಾಟಿನಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂಬ ವಿಚಾರಣೆಯೂ ನಡೆಯುತ್ತಿದೆ. ಅರಣ್ಯ ಇಲಾಖೆಯಲ್ಲಿ ಮತ್ತೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಪ್ರಕರಣ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನು ನೋಡಿ : ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಚುವ ವಿಚಾರ- ಶಿರಾದಲ್ಲಿ ಹೆಚ್ಚಾಯ್ತು ಸಾರ್ವಜನಿಕರ ಆಕ್ರೋಶ




