Hundi Counting At Sri Nanjundeshwara Swamy Temple : ನಂಜನಗೂಡಿನ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಈ ಬಾರಿ ದಾಖಲೆ ಪ್ರಮಾಣದ ಮೊತ್ತ ಸಂಗ್ರಹವಾಗಿದೆ.

ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯದಲ್ಲಿ ಈ ಬಾರಿ ದಾಖಲೆಯಷ್ಟು ಭಕ್ತರ ಕೊಡುಗೆ ಸಂಗ್ರಹವಾಗಿದೆ. ಕಳೆದ 40 ದಿನಗಳ ಅವಧಿಯಲ್ಲಿ ಒಟ್ಟು ₹3,02,63,795 ಮೊತ್ತ ಹುಂಡಿಗೆ ಬಂದಿದ್ದು, ನಂಜುಂಡೇಶ್ವರನಿಗೆ ‘ಕೋಟಿ ಕೋಟಿ ಒಡೆಯ’ ಎಂಬ ಹೆಸರು ಮತ್ತೊಮ್ಮೆ ಸಾರ್ಥಕಗೊಂಡಿದೆ.
ಹುಂಡಿಯಲ್ಲಿ ಬೇರೆ ದೇಶದ ಕರೆನ್ಸಿ ನೋಟುಗಳು
ಹುಂಡಿ ಎಣಿಕೆ ವೇಳೆ ಇಂಗ್ಲೆಂಡ್, ಸ್ವೀಡನ್, ಸಿಂಗಾಪುರ, ಕುವೈತ್, ನೇಪಾಳ, ಮಲೇಶಿಯಾ, ಯುಎಸ್ಎ, ಭೂತಾನ್ ಮತ್ತು ತೈವಾನ್ ದೇಶಗಳ ಕರೆನ್ಸಿ ನೋಟುಗಳು ಪತ್ತೆಯಾಗಿವೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ಪ್ರವಾಸಿಗರ ಆಗಮನ ಗಣನೀಯವಾಗಿ ಹೆಚ್ಚಿರುವುದೇ ಇದರ ಪ್ರಮುಖ ಕಾರಣ ಎಂದು ದೇವಾಲಯ ಮೂಲಗಳು ತಿಳಿಸಿವೆ.
ಇದನ್ನು ಓದಿ : Hong Kong|ಧಗಧಗನೆ ಉರಿದ ಕಟ್ಟಡ – 44 ಹೆಚ್ಚು ಮಂದಿ ಸಾವು

82 ಗ್ರಾಂ ಚಿನ್ನ ಮತ್ತು 2 ಕೆಜಿ 680 ಗ್ರಾಂ ಬೆಳ್ಳಿ ಸಂಗ್ರಹ
ಹಣದ ಜೊತೆಗೆ 82 ಗ್ರಾಂ ಚಿನ್ನ ಮತ್ತು 2 ಕೆಜಿ 680 ಗ್ರಾಂ ಬೆಳ್ಳಿ ಕೂಡ ಸಂಗ್ರಹವಾಗಿದೆ. ಜೊತೆಗೆ ಹುಂಡಿಯಲ್ಲಿ ನಿಷೇಧಿತ ಸಾವೂರ್ ಮತ್ತು ಹಳೆಯ ₹500 ಮುಖಬೆಲೆಯ ನೋಟುಗಳೂ ಪತ್ತೆಯಾಗಿವೆ.
ಭಕ್ತಾಧಿಗಳ ಭಕ್ತಿ, ನಂಬಿಕೆ ಮತ್ತು ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಈ ಬಾರಿ ಸಂಗ್ರಹವಾಗಿರುವ ಮೊತ್ತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಇದನ್ನು ನೋಡಿ : ಮುರುಘಾ ಶ್ರೀಗಳಿಗೆ ಬಿಗ್ ರಿಲೀಫ್- ಕೋರ್ಟ್ನಿಂದ ಮಹತ್ವದ ತೀರ್ಪು




