Hong Kong Fire : ರಿಪಬ್ಲಿಕ್ ಆಫ್ ಚೀನಾ ಅಡ್ಮಿಸ್ಟ್ರೇಟಿವ್ ಹಾಂಗ್ಕಾಂಗ್ನ ಬಹುಮಹಡಿ ಅಪಾರ್ಟ್ಮೆಂಟ್ಗಳಲ್ಲಿ ಅಗ್ನಿನರ್ತನ ಆಗಿದ್ದು ಅಪಾರ ಸಾವು ನೋವು ಸಂಭವಿಸಿದೆ.

ಹಾಂಕಾಂಗ್ನ ತೈ ಪೋ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 44ಕ್ಕೆ ಏರಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಕಟ್ಟಡಗಳ ಒಳಗೆ ಇನ್ನೂ ಹೆಚ್ಚಿನ ಜನರು ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : DCM ಡಿಕೆ ಶಿವಕುಮಾರ್ ಮಾರ್ಮಿಕ ಎಕ್ಸ್ ಸಂದೇಶ

ಗಾಯಗೊಂಡವರಲ್ಲಿ ಇಬ್ಬರು ಅಗ್ನಿಶಾಮಕ ದಳದವರೂ ಸೇರಿದ್ದಾರೆ. ಒಬ್ಬರು ತೀವ್ರ ಗಾಯದಿಂದ ಬಳಲುತ್ತಿದ್ದಾರೆ ಮತ್ತು ಇನ್ನೊಬ್ಬರ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ವಾಂಗ್ ಫುಕ್ ಕೋರ್ಟ್ ವಸತಿ ಸಂಕೀರ್ಣದ ದೃಶ್ಯಗಳು ಅಪಾರ್ಟ್ಮೆಂಟ್ ಕಿಟಕಿಗಳ ಮೂಲಕ ಎತ್ತರದ ಜ್ವಾಲೆಗಳು ಸಿಡಿಯುತ್ತಿರುವುದನ್ನು ತೋರಿಸಿವೆ,

ಎಂಟು ಕಟ್ಟಡಗಳಲ್ಲಿ ಏಳು ಕಟ್ಟಡಗಳು ರಾತ್ರಿಯವರೆಗೂ ಉರಿದಿದೆ. 767 ಅಗ್ನಿಶಾಮಕ ದಳದವರು, 128 ಅಗ್ನಿಶಾಮಕ ವಾಹನಗಳು, 57 ಆಂಬ್ಯುಲೆನ್ಸ್ಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಬೃಹತ್ ತುರ್ತು ಸೇವೆಯನ್ನು ನಿಯೋಜಿಸಲಾಗಿದೆ.

ಆ ಮಹಡಿಯನ್ನು ಬಿದಿರಿನ ಸ್ಕ್ಯಾಫೋಲ್ಡಿಂಗ್ ಸುತ್ತುವರೆದಿತ್ತು. ಇದು ಹಾಂಕಾಂಗ್ನ ಸ್ಕೈಲೈನ್ನಲ್ಲಿ ವ್ಯಾಪಕವಾಗಿ ಬಳಸಲಾಗುವ ಸಾಂಪ್ರದಾಯಿಕ ವಿಧಾನವಾಗಿದೆ. ಆದರೆ, ಇದರಿಂದಾಗಿ ಬೆಂಕಿ ಅವಘಡ ಹೆಚ್ಚಾಗಲಿದೆ ಎನ್ನಲಾಗಿದೆ.
ಇದನ್ನು ನೋಡಿ : SUB REGISTRAR OFFICE ನಲ್ಲಿ ಸರ್ವರ್ ಪ್ರಾಬ್ಲಂ ಕ್ಯೂನಲ್ಲಿ ನಿಂತ ಸಾರ್ವಜನಿಕರ ಗೋಳು




