DK Shivakumar : ಡಿಕೆ ಶಿವಕುಮಾರ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಾಕಿರುವ ಮಾರ್ಮಿಕ ಸಂದೇಶ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

D.K. Shivakumar : ಕರ್ನಾಟಕ ಕಾಂಗ್ರೆಸ್ನಲ್ಲಿ (Karnataka Congress) ಅಧಿಕಾರ ಹಂಚಿಕೆ ಚರ್ಚೆ (Karnataka politics) ತೀವ್ರಗೊಂಡಿರುವ ಸಂದರ್ಭದಲ್ಲಿಯೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಾಕಿರುವ ಮಾರ್ಮಿಕ ಸಂದೇಶ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ
ʼWord power is world powerʼ ಎಂದು ಬರೆಯಲಾದ ತಮ್ಮ ಫೋಟೋ ಹಾಕಿಕೊಂಡಿರುವ ಡಿಕೆಶಿ, ʼಎಕ್ಸ್ʼನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ನ್ಯಾಯಾಧೀಶರಾಗಿರಲಿ, ಅಧ್ಯಕ್ಷರಾಗಿರಲಿ, ಅಥವಾ ನಾನೂ ಸೇರಿ ಯಾರೇ ಆಗಿರಲಿ—ಆಡಿದ ಮಾತಿನಂತೆ ನಡೆದುಕೊಳ್ಳಬೇಕು”
ಎಂದು ಡಿಕೆ ಶಿವಕುಮಾರ್ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ : ರಾಜ್ಯ ಸರ್ಕಾರದಿಂದ ಗರ್ಭಿಣಿ ಮಹಿಳೆಯರಿಗೆ ಗುಡ್ನ್ಯೂಸ್

ಮಾತಿನ ಶಕ್ತಿಯೇ ವಿಶ್ವದ ಶಕ್ತಿ
ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲೂ ಅವರು ಇದೇ ಸಂದೇಶವನ್ನು ನೀಡಿದರು. “ಮಾತಿನ ಶಕ್ತಿಯೇ ವಿಶ್ವದ ಶಕ್ತಿ. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ” ಎಂದು ಡಿಕೆಶಿ ಹೇಳಿದ್ದರು.
ರಾಜಕೀಯ ವಲಯದಲ್ಲಿ ಚರ್ಚೆ
ಕಾಂಗ್ರೆಸ್ ಒಳಗಿರುವ ಅಧಿಕಾರ ಹಂಚಿಕೆ ಚರ್ಚೆಗಳು ಮುಂದುವರಿದಿರುವ ಸಂದರ್ಭದಲ್ಲಿ ಡಿಕೆಶಿಯ ಈ ಮಾತುಗಳು ವಿಶೇಷ ಮಹತ್ವ ಪಡೆದಿವೆ. ಇದೀಗ ಈ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಮತ್ತು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ಇದನ್ನು ನೋಡಿ : ಮೈ ಭಾರತ್ ಇಲಾಖೆ ಪ್ರೋಗ್ರಾಮ್ ಗೆ ಬ್ರೇಕ್ಯುವ ಜನತೆ, ಪ್ರಜಾಶಕ್ತಿ ಟಿವಿಗೆ ಸಂದ ಜಯ




