D.K. Shivakumar : ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಮುಖ್ಯಮಂತ್ರಿ ಹುದ್ದೆಯ ಶೀತಲ ಸಮರ ತೀವ್ರಗೊಂಡಿದೆ.

D.K. Shivakumar : ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ (DK Shivakumar) ನಡುವಿನ ಮುಖ್ಯಮಂತ್ರಿ ಹುದ್ದೆಯ ಶೀತಲ ಸಮರ ತೀವ್ರಗೊಂಡಿದೆ. ಇಲ್ಲಿವರೆಗೆ ದಿನ ದೂಡ್ತಾ ಬಂದಿದ್ದ ಹೈಕಮಾಂಡ್ಗೆ ಕುರ್ಚಿ ಕದನಕ್ಕೆ ಬ್ರೇಕ್ ಹಾಕಲೇಬೇಕಾದ ಅನಿವಾರ್ಯತೆಯಲ್ಲಿದೆ. ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ದೇವರ ಮೊರೆ ಹೋಗೋದನ್ನ ಮುಂದುವರಿಸಿದ್ದಾರೆ.

ಡಿಕೆಶಿಗೆ ನಾಗ ಸಾಧುಗಳ ಆಶೀರ್ವಾದ
ಇತ್ತೀಚೆಗೆ ಕಾಶಿಯಿಂದ ಬಂದಿದ್ದ ನಾಗ ಸಾಧುಗಳು ಡಿಕೆಶಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ತಲೆಯ ಮೇಲೆ ಕೈ ಇಟ್ಟು, “ಮುಂದಿನ ದಿನಗಳಲ್ಲಿ ಸಿಎಂ ಆಗಲಿ” ಎಂದು ಆಶೀರ್ವಾದ ಮಾಡಿದ್ದರು. ಸಾಧುಗಳ ಈ ಆಶೀರ್ವಾದ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು.
ಇದನ್ನು ಓದಿ : Gold Price Today|ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ

ಅಜ್ಜಯ್ಯನ ಗದ್ದುಗೆಗೆ ಡಿಕೆಶಿ ಮನೆಯಲ್ಲಿ ವಿಶೇಷ ಪೂಜೆ
ಈ ಬೆನ್ನಲ್ಲೇ ʻಹಂದನ ಕೆರೆ ಅಜ್ಜಯ್ಯನ ಗದ್ದುಗೆʼ ಡಿಕೆಶಿ ಮನೆಗೆ ಆಗಮಿಸಿದೆ. ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಅಜ್ಜಯ್ಯನ ಗದ್ದುಗೆ ಕರೆಸಿ ಕುಟುಂಬ ಸಮೇತರಾಗಿ ಪೂಜೆ ನೆರವೇರಿಸಿದ್ದಾರೆ.

ಜೇನುಕಲ್ ಸಿದ್ದೇಶ್ವರಸ್ವಾಮಿಗಳ ಉತ್ಸವಮೂರ್ತಿಗೂ ಪೂಜೆ
ಇದಕ್ಕೂ ಮುನ್ನ ಅರಸೀಕೆರೆ ತಾಲ್ಲೂಕಿನ ಯಾದಪುರದಲ್ಲಿರುವ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿಗಳ ಉತ್ಸವಮೂರ್ತಿಯನ್ನು ಕೂಡ ಡಿಕೆಶಿ ತಮ್ಮ ನಿವಾಸಕ್ಕೆ ಕರೆಸಿ ಕುಟುಂಬದೊಂದಿಗೆ ಸಂಕಲ್ಪ ಪೂಜೆ ಸಲ್ಲಿಸಿದ್ದರು.

ಇದನ್ನು ನೋಡಿ : Namma Metro|ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಪ್ರತಿ ಸೋಮವಾರ ಸಿಗಲಿದೆ ಈ ಸೌಲಭ್ಯ




