Hassan: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ (Bike) ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು (Beluru) ತಾಲ್ಲೂಕಿನ, ಮುತ್ತಗನ್ನೆ ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ.

Hassan: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಇಂದು ಮುಂಜಾನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮುತ್ತಗನ್ನೆ ಗ್ರಾಮದ ಬಳಿ ಸಂಭವಿಸಿದೆ.
ಬೇಲೂರಿನಲ್ಲಿ ಬೈಕ್ ಅಪಘಾತ: ಇಬ್ಬರ ದುರ್ಮರಣ
ಮೃತರನ್ನು ಬೇಲೂರು ತಾಲೂಕಿನ ಹೊನ್ನೇನಹಳ್ಳಿ ನಿವಾಸಿ ಲೋಕೇಶ್ (25) ಹಾಗೂ ಚಿಕ್ಕಮಗಳೂರು ಜಿಲ್ಲೆಯ ರಾಮೇನಹಳ್ಳಿ ನಿವಾಸಿ ಕಿರಣ್ (32) ಎನ್ನಲಾಗಿದೆ.
ಯುವಕರ ಜೀವ ಬಲಿ ಪಡೆದ ರಸ್ತೆ ದುರಂತ
ಇಂದು ಲೋಕೇಶ್ ಅವರ ತಂಗಿಯ ಆರತಕ್ಷತೆ ಇದ್ದ ಹಿನ್ನೆಲೆಯಲ್ಲಿ ಮಜ್ಜಿಗೆ ಮತ್ತು ಮೊಸರು ತರಲು KA-05 LE-4017 ಸಂಖ್ಯೆಯ ಹೀರೋ ಸ್ಪ್ಲೆಂಡರ್ ಬೈಕ್ನಲ್ಲಿ ಇಬ್ಬರೂ ಬೇಲೂರಿನ ಕಡೆಗೆ ಬರುತ್ತಿದ್ದರು. ಈ ವೇಳೆ ಅಪರಿಚಿತ ವಾಹನವು ಡಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ.

ಇದನ್ನು ಓದಿ: Accident: ಹೊಸ ಕಾರು ಡೆಲಿವರಿ ಪಡೆದ 24 ಗಂಟೆಯಲ್ಲೇ ಅಪಘಾತವಾಗಿ ಡ್ಯಾನ್ಸರ್ ಸಾವು..!
ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಲೋಕೇಶ್ ಹಾಗೂ ಕಿರಣ್ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಅಪಘಾತದ ರಭಸಕ್ಕೆ ಮೃತದೇಹಗಳು ಬಿದ್ದಿದ್ದ ಜಾಗದಿಂದ ಸುಮಾರು 10 ಅಡಿ ದೂರದಲ್ಲಿ ಬೈಕ್ ಬಿದ್ದಿದೆ.
ಮುತ್ತಗನ್ನೆ ಗ್ರಾಮದ ಬಳಿ ದಾರುಣ ಅಪಘಾತ
ಬೆಳಿಗ್ಗೆ ಗ್ರಾಮಸ್ಥರು ರಸ್ತೆ ಬದಿಯಲ್ಲಿ ಮೃತದೇಹಗಳನ್ನು ಕಾಣುತ್ತಿದ್ದಂತೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪಿಎಸ್ಐ ಪಾಟೀಲ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
MUST WATCH: ಗಣೇಶ ಮೆರವಣಿಗೆಯಲ್ಲಿ ಟ್ರಕ್ ದಾಳಿ – 9 ಜನ ಸಾ*, 20ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ




