ACCIDENT: ನಿಂತಿದ್ದ ಕಾರಿಗೆ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿ, ಡ್ಯಾನ್ಸರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಬಳಿ ನಡೆದಿದೆ.

ACCIDENT: ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಬಳಿ ನಡೆದ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಖ್ಯಾತ ಯುವ ಡ್ಯಾನ್ಸರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತ್ಯಾಮಗೊಂಡ್ಲು ಗ್ರಾಮದ ನಿವಾಸಿ ಸುಧೀಂದ್ರ ಎಂಬಾತ ಮೃತ ದುರ್ದೈವಿಯಾಗಿದ್ದಾನೆ.
ಇನ್ನು ನಿಂತಿದ್ದ ಕಾರಿಗೆ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಇನ್ನು ಮೃತ ಯುವಕ ಸುಧೀಂದ್ರ ಸೋಮವಾರವಷ್ಟೇ ಹೊಸ ಮಾರುತಿ ಸುಜುಕಿ ಎಕೋ ಕಾರು ಡೆಲಿವರಿ ಪಡೆದಿದ್ದ, ಆದರೆ ಇಂದು ಬೆಳಿಗ್ಗೆ ಕಾರು ರಸ್ತೆ ಮಧ್ಯೆ ಕೆಟ್ಟು ನಿಂತಿದ್ದರಿಂದ ಅದನ್ನು ಪರಿಶೀಲಿಸಲು ಕಾರಿನಿಂದ ಕೆಳಗಿಳಿದ ಸಂದರ್ಭದಲ್ಲಿ, ವೇಗವಾಗಿ ಬರುತ್ತಿದ್ದ ಕ್ಯಾಂಟರ್ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸುಧೀಂದ್ರನಿಗೆ ತೀವ್ರ ಗಾಯಗಳಾಗಿದ್ದು. ಅಪಘಾತದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Earthquake : ವಿಜಯಪುರದಲ್ಲಿ ಮತ್ತೆ ಭೂಕಂಪನ: 2 ತಿಂಗಳಲ್ಲಿ 13ನೇ ಬಾರಿ ಭೂಮಿ ನಡುಗಿದ ಅನುಭವ
ಇನ್ನು ಮೃತ ಯುವಕ ಸುಧೀಂದ್ರ ಜನಪ್ರಿಯ ಕನ್ನಡ ರಿಯಾಲಿಟಿ ಶೋ ‘ಸೈ ಡ್ಯಾನ್ಸ್’ ಸೇರಿದಂತೆ ಹಲವು ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅಲ್ದೇ ಡಾಬಸ್ ಪೇಟೆಯಲ್ಲಿ ತಮ್ಮದೇ ಡ್ಯಾನ್ಸ್ ಕ್ಲಾಸ್ ನಡೆಸಿ ನೂರಾರು ಯುವಕರು ಮತ್ತು ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಿದ್ದು, ಜೊತೆಗೆ ಫ್ಲವರ್ ಡೆಕೋರೇಷನ್ ಮತ್ತು ಇವೆಂಟ್ ಆಯೋಜನೆಯಲ್ಲೂ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಸದ್ಯ ಘಟನೆ ಸಂಬಂಧ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
MUST WATCH: FAKE LIQUOR | ಮಧುಗಿರಿಯ ಗಡಿಭಾಗದಲ್ಲಿ ನಕಲಿ ಮದ್ಯ ದಂಧೆ ಅಕ್ರಮ ಸೇಂದಿ ಸೇವಿಸಿ 20 ಮಂದಿ ಅಸ್ವಸ್ಥ




