Mysuru Murder : ಸಾಂಸ್ಕೃತಿಕ ನಗರಿ ಮೈಸೂರಿನ ಶಾಂತಿನಗರದಲ್ಲಿ ಮಾರಕಾಸ್ತ್ರಗಳು ಝಳಪಿಸಿದೆ.

Mysuru Murder : ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ಶಾಂತಿನಗರದಲ್ಲಿ ಮಾರಕಾಸ್ತ್ರಗಳು ಝಳಪಿಸಿದೆ. ಸ್ನೇಹಿತನ ಜೊತೆ ಟೀ ಕುಡಿಯಲು ಹೋಗಿದ್ದ ಯುವಕನನ್ನ ಮದ್ಯವ್ಯಸನಿ ಯುವಕರು ಬರ್ಬರವಾಗಿ ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 19 ವರ್ಷದ ಯುವಕ ಸಯ್ಯದ್ ಸೂಫಿಯನ್ (Syed Sufian ) ತನ್ನ ಸ್ನೇಹಿತರಿಂದಲೇ ಹತ್ಯೆಗೀಡಾಗಿದ್ದಾರೆ.
ಸ್ನೇಹಿತರಿಂದಲೇ ಅಟ್ಟಾಡಿಸಿ ಕೊಲೆ
ಇಂದು ಮುಂಜಾನೆ 5:40 ಸುಮಾರಿಗೆ ಟೀ ಕುಡಿಯಲು ಹೋಗಿದ್ದ ವೇಳೆ ಮದ್ಯವ್ಯಸನಿ ಯುವಕರು ಸೂಫಿಯಾನ್ ಜೊತೆ ಹೊಡೆದಾಡಿದ್ದಾರೆ. ಇದೇ ವೇಳೆ ಚಾಕುವಿನಿಂದ ಚುಚ್ಚಿದ್ದಾರೆ. ಇಬ್ಬರು ಸ್ನೇಹಿತರು ಸೇರಿ ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ. ಎದೆ ಮತ್ತು ಬೆನ್ನಿನ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾರೆ.
ಇದನ್ನು ವೀಕ್ಷಿದ ಜನ ಯಾರೊಬ್ಬರೂ ಸಹಾಯಕ್ಕೆ ಬಾರದ ಹಿನ್ನೆಲೆ ರಸ್ತೆಯಲ್ಲೇ ಯುವಕ ನರಳಿ ಪ್ರಾಣ ಬಿಟ್ಟಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : D.K. Shivakumar|`ಪವರ್ ಫೈಟ್ʼ ನಡುವೆ ದೇವರ ಮೊರೆಹೋದ ಡಿಕೆಶಿ

Mysuru Murder – ಗಾಂಜಾ, ಡ್ರಗ್ಸ್ ಸೇವಿಸಿ ಕೊಲೆ
ಕೊಲೆಗೈದವರು ಗಾಂಜಾ, ಡ್ರಗ್ಸ್ ಸೇವಿಸಿ ತಮ್ಮ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಸೂಫಿಯನ್ ಪೋಷಕರು ಆರೋಪಿಸಿದ್ದಾರೆ. ಶಾಂತಿನಗರದಲ್ಲಿ ಡ್ರಗ್ಸ್ ಬಳಕೆ ಹೆಚ್ಚಾಗಿದ್ದು, ಮಕ್ಕಳೂ ಗಾಂಜಾ, ಟ್ಯಾಬ್ಲೆಟ್, ಸೆಲ್ಯೂಷನ್ ಸೇವನೆ ಮಾಡುತ್ತಿರುವ ಪರಿಸ್ಥಿತಿ ಕಂಡುಬಂದಿದೆ.
Mysuru Murder – ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ
ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ.ಇಲ್ಲವಾದ್ರೆ ನಮ್ಮನ್ನೂ ಕೊಲೆ ಮಾಡಿ ಎಂದು ಕೊಲೆಯಾದ ಸೂಫಿಯಾನ್ ತಾಯಿ ಶಾಯಿನ್ ತಾಜ್ ಗೋಳಾಡಿದ್ದಾರೆ. ಇನ್ನು ಮೃತ ಯುವಕ ಸೂಫಿಯನ್ ಸ್ಥಳೀಯ ಕಾವೇರಿ ಸಿಲ್ಕ್ ಸ್ಯಾರಿ ಅಂಗಡಿಯಲ್ಲಿ (Kaveri Silk And Sares) ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ದೊರಕಿದೆ.

ಇದನ್ನು ನೋಡಿ : DK Shivakumar|ಸಾಹುಕಾರ್ ಜೊತೆ ಡಿಕೆಶಿ ಸೀಕ್ರೆಟ್ ಮೀಟಿಂಗ್; ಸತೀಶ್ಗೆ ಬಿಗ್ ಆಫರ್ ಕೊಟ್ಟ ಡಿಸಿಎಂ?




