Nelamangala Crime News: Bengaluru ವಿದ್ಯಾರ್ಥಿನಿ ದೇವಿಶ್ರೀ ಹತ್ಯೆ. ಸ್ನೇಹಿತೆ ರೂಂಗೆ ಕರೆದೊಯ್ದು ಕೊಲೆ ಮಾಡಿದ ಆರೋಪಿಯನ್ನು ತಿರುಪತಿಯಲ್ಲಿ ಪೊಲೀಸರು ಬಂಧಿಸಿದರು.

Nelamangala Murder Case : ವಿದ್ಯಾರ್ಥಿನಿ ಹತ್ಯೆ ಪ್ರಕರಣದಲ್ಲಿ ಆರೋಪಿ ಅರೆಸ್ಟ್
ನೆಲಮಂಗಲ (Nelamangala) ಪ್ರದೇಶದಲ್ಲಿ ನಡೆದ ವಿದ್ಯಾರ್ಥಿನಿ ದೇವಿಶ್ರೀ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ತಿರುಪತಿಯಲ್ಲಿ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಯಾರು ದೇವಿಶ್ರೀ? ಹತ್ಯೆಯ ಹಿಂದೆ ಏನು ನಡೆದಿದೆ?
ದೇವಿಶ್ರೀ ಹಾಗೂ ಆರೋಪಿಯಾಗಿರುವ ಪ್ರೇಮ್ವರ್ಧನ್ ಇಬ್ಬರೂ ಆಂಧ್ರ ಮೂಲದವರು.ಇಬ್ಬರೂ ದ್ವಿತೀಯ ಪಿಯುಸಿವರೆಗೂ ಒಂದೇ ಕಾಲೇಜಿನಲ್ಲಿ ಓದಿ ಪ್ರೀತಿಯಲ್ಲಿ ಮುಳುಗಿದ್ದರು.ನಂತರ ದೇವಿಶ್ರೀ ಬಿಬಿಎಮ್ ಮಾಡಲು ಬೆಂಗಳೂರಿಗೆ ಬಂದಳು.ಇದರ ಮಧ್ಯೆ, ಪ್ರೇಮ್ವರ್ಧನ್ ಆಗಾಗ ಬೆಂಗಳೂರಿಗೆ ಭೇಟಿ ನೀಡುತ್ತಿದ್ದ.
ದೇವಿಶ್ರೀ ಬೆಂಗಳೂರಿಗೆ ಬಂದ ನಂತರ ಮತ್ತೊಬ್ಬ ಹುಡುಗನೊಂದಿಗೆ ಮಾತನಾಡುತ್ತಿದ್ದಳು ಎಂಬ ಅನುಮಾನ ಪ್ರೇಮ್ವರ್ಧನ್ನಲ್ಲಿತ್ತು.ದೇವಿಶ್ರೀ ಫೋನ್ನಲ್ಲಿ ಮತ್ತೊಬ್ಬ ಹುಡುಗನೊಂದಿಗೆ ಮಾತನಾಡುತ್ತಿರುವುದು ಕಂಡು ಬಂದ ನಂತರ .ಪ್ರೇಮ್ವರ್ಧನ್ ಕೋಪದಿಂದ ತುಂಬಿಕೊಂಡಿದ್ದ .ಭಾನುವಾರ ಬೆಂಗಳೂರಿಗೆ ಬಂದು ದೇವಿಶ್ರೀಯನ್ನು ಸ್ನೇಹಿತೆಯ ರೂಂಗೆ ಕರೆದೊಯ್ದು ಹತ್ಯೆ ಮಾಡಿದ.
ಇದನ್ನು ಓದಿ : ಶ್ರೀರಾಮನ ಸನ್ನಿಧಿಯಲ್ಲಿ ರಾರಾಜಿಸಿದ ಧರ್ಮಧ್ವಜ..!
ತಿರುಪತಿಯಲ್ಲಿ ಸಿಕ್ಕಿಬಿದ್ದ ಆರೋಪಿ
ಹತ್ಯೆ ಮಾಡಿದ ನಂತರ ಪ್ರೇಮ್ವರ್ಧನ್ ಸ್ಥಳದಿಂದ ಪರಾರಿಯಾಗಿದ್ದ.ಆದರೆ,ಮಾದನಾಯಕನಹಳ್ಳಿ ಪೊಲೀಸರು ತಕ್ಷಣ ತನಿಖೆ ಆರಂಭಿಸಿ,ಆರೋಪಿ ತಿರುಪತಿಯಲ್ಲಿ ಅಡಗಿರುವ ಮಾಹಿತಿ ಪಡೆದು, ಸ್ಪೆಷಲ್ ತಂಡವನ್ನು ರವಾನಿಸಿ ಪ್ರೇಮ್ವರ್ಧನ್ನನ್ನು ಅರೆಸ್ಟ್ ಮಾಡಲಾಗಿದೆ
ನೆಲಮಂಗಲದಲ್ಲಿ ಪ್ರಕರಣಕ್ಕೆ ಭಾರೀ ಪ್ರತಿಕ್ರಿಯೆ
ಈ ವಿದ್ಯಾರ್ಥಿನಿಯ ಹತ್ಯೆ ಪ್ರಕರಣ ನೆಲಮಂಗಲ ಮತ್ತು ಬೆಂಗಳೂರಿನಲ್ಲಿ ಆತಂಕ ಮೂಡಿಸಿದೆ.ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದು, ಮೊಬೈಲ್ ಕಾಲ್ ಡೀಟೈಲ್ಸ್, ಸಾಕ್ಷ್ಯಗಳು ಮತ್ತು ಹತ್ಯೆಗೆ ಬಳಸಿದ ಸಾಧನಗಳನ್ನು ಪರಿಶೀಲಿಸುತ್ತಿದ್ದಾರೆ.
Nelamangala Murder Case ಒಂದು ಪ್ರೇಮ ಸಂಬಂಧದ ಕಲಹದಿಂದ ಉಂಟಾದ ದಾರುಣ ಘಟನೆ. ವಿದ್ಯಾರ್ಥಿನಿ ದೇವಿಶ್ರೀಯ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಪ್ರೇಮ್ವರ್ಧನ್ನನ್ನು ಬಂಧಿಸಿರುವುದು ಪ್ರಕರಣಕ್ಕೆ ಮಹತ್ವದ ತಿರುವು.
ಇದನ್ನು ನೋಡಿ : ಬೆಂಗಳೂರಲ್ಲಿ 7.11 ಕೋಟಿ ದರೋಡೆ ಕೇಸ್: ಮತ್ತೆ 42 ಲಕ್ಷ ರೂ. ಜಪ್ತಿ; ಈವರೆಗೆರಿ ಕವರಿಯಾದ ಹಣವೆಷ್ಟು?




