Pratap Simha : ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದ ಆರೋಪಿ ನಟ ದರ್ಶನ್ ಸಿನಿಮಾ ಪ್ರಮೋಷನ್ ಮಾಡಿದ್ದಾರೆ.

ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿ ಆಗಿರುವ ನಟ ದರ್ಶನ್ (Actor Darshan) ಅಭಿನಯದ ‘ಡೆವಿಲ್’ ಚಿತ್ರದ ಪೋಸ್ಟರ್ ಅನ್ನು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಮೈಸೂರಿನಲ್ಲಿ ಬಿಡುಗಡೆ ಮಾಡಿ ಪ್ರಚಾರ ಮಾಡಿದ್ದಾರೆ.
ನಾನು ದರ್ಶನ್ ಅವರ ದೊಡ್ಡ ಅಭಿಮಾನಿ
ಪೋಸ್ಟರ್ ಬಿಡುಗಡೆ ಬಳಿಕ ಮಾತನಾಡಿದ ಪ್ರತಾಪ್ ಸಿಂಹ ಅವರು ನಾನು ದರ್ಶನ್ ಅವರ ದೊಡ್ಡ ಅಭಿಮಾನಿ ಎಂದು ತಿಳಿಸಿದ್ದಾರೆ. “ಕನ್ನಡದಲ್ಲಿ ಅನೇಕ ನಟರು ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವವರು ಒನ್ ಅಂಡ್ ಓನ್ಲಿ ದರ್ಶನ್.
ಇದನ್ನು ಓದಿ : Gold Price Today : ಇಂದು ಚಿನ್ನ, ಬೆಳ್ಳಿ ಬೆಲೆ ಇಳಿಕೆ
ಮಜೆಸ್ಟಿಕ್, ಕರಿಯ ಕಾಲದಿಂದಲೂ ಸಿನಿಮಾಗಳನ್ನು ನೋಡುತ್ತಿದ್ದೇನೆ
ನಾನು ಮಜೆಸ್ಟಿಕ್, ಕರಿಯ ಕಾಲದಿಂದಲೂ ಅವರ ಸಿನಿಮಾಗಳನ್ನು ನೋಡುತ್ತಿದ್ದೇನೆ. ‘ಕೆಂಚಾಲೋ ಮಂಚಾಲೋ’ ಹಾಡು ಆ ಕಾಲದಲ್ಲಿ ಕ್ರೇಜ್ ಹುಟ್ಟಿಸಿತ್ತು. ಆಗಿನಿಂದಲೂ ನಾನು ದರ್ಶನ್ ಫ್ಯಾನ್,” ಎಂದು ಹೇಳಿದರು.
ಡಿಸೆಂಬರ್ 11ಕ್ಕೆ ಮುಂದೂಡಿಕೆ
‘ಡೆವಿಲ್’ ಸಿನಿಮಾ ಮೊದಲಿನಿಂದ ಡಿಸೆಂಬರ್ 12ರಂದು ಬಿಡುಗಡೆಯಾಗ ಬೇಕಿತ್ತು. ಆದರೆ ದರ್ಶನ್ ಅಭಿಮಾನಿಗಳ ಒತ್ತಾಯದ ಮೇರೆಗೆ ರಿಲೀಸ್ ದಿನಾಂಕವನ್ನು ಡಿಸೆಂಬರ್ 11ಕ್ಕೆ ಮುಂದೂಡಲಾಗಿದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ. “ಕನ್ನಡ ಜನರ ಪ್ರೀತಿ ಸಿನಿಮಾವನ್ನು ಗೆಲ್ಲಿಸಲಿ. ತಾಯಿ ಚಾಮುಂಡೇಶ್ವರಿಯ ಕೃಪೆ ದರ್ಶನ್ ಮೇಲಿರಲಿ. ಸಿನಿಮಾ ಅದ್ಭುತ ಯಶಸ್ಸು ಕಾಣಲಿ,” ಎಂದು ಪ್ರತಾಪ್ ಸಿಂಹ ಅವರು ಶುಭ ಹಾರೈಸಿದರು.
ಇದನ್ನು ನೋಡಿ : ಪರ್ಮಿಷನ್ ಇಲ್ಲದೇ ಅರಳೀಮರ ನಾಶ ಇಡೀ ಊರಿಗೆ ಊರೇ ಕೆರಳಿ ಕೆಂಡವಾದ್ರು




