Mandya : ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗ್ತಾರೋ, ಇಲ್ವೋ ಎಂದು ಮಂಡ್ಯದಲ್ಲಿ ಬಿಜೆಪಿ ನಾಯಕರು ಗಿಣಿ ಶಾಸ್ತ್ರ ಕೇಳಿದ್ದಾರೆ.

Mandya : ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಕುರ್ಚಿ ಕದನ ಜೋರಾಗಿದ್ದು, ಡಿ.ಕೆ.ಶಿವಕುಮಾರ್ (D.K.Shivakumar) ಅವರು ಸಿಎಂ ಆಗ್ತಾರೋ, ಇಲ್ವೋ ಎಂದು ಮಂಡ್ಯದಲ್ಲಿ ಬಿಜೆಪಿ ನಾಯಕರು ಗಿಣಿ ಶಾಸ್ತ್ರದಿಂದ ಕೇಳಿದ್ದಾರೆ. ಆ ಮೂಲಕ ಡಿಕೆಶಿ ‘ಗಿಣಿ ಶಾಸ್ತ್ರ ಕೇಳಿ’ ಹೇಳಿಕೆಗೆ ಟಕ್ಕರ್ ಕೊಟ್ಟಿದ್ದಾರೆ.
DK ಗೆ ತಿರುಗೇಟು ನೀಡಿದ BJP ನಾಯಕರು
ಮುಖ್ಯಮಂತ್ರಿ ವಿಚಾರಕ್ಕೆ ಬಿಜೆಪಿಯವರು ಗಿಣಿ ಶಾಸ್ತ್ರ ಕೇಳಿ ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದರು. ಡಿಕೆಶಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು ಗಿಣಿ ಶಾಸ್ತ್ರ ಕೇಳಿ ಡಿಸಿಎಂಗೆ ತಿರುಗೇಟು ನೀಡಿದ್ದಾರೆ.
ಇದನ್ನು ಓದಿ : ಮುಂದಿನ ವರ್ಷದವರೆಗೆ Shubman Gill ತಂಡದಿಂದ ಔಟ್..!
ಕೈಗೆ ಚೊಂಬು ಎಂದು ಬಿಜೆಪಿ ಕಾರ್ಯಕರ್ತರು ವ್ಯಂಗ್ಯ
ಈ ಸಂದರ್ಭದಲ್ಲಿ ಡಿಕೆಶಿ ಸಿಎಂ ಆಗುತ್ತಾರೋ ಇಲ್ಲವೋ ಎಂದು ಗಿಣಿ ಶಾಸ್ತ್ರ ಕೇಳಿದ್ದಾರೆ. ಈ ವೇಳೆ “ಚೊಂಬು” ಕಾರ್ಡ್ನ್ನು ಗಿಣಿ ತೆಗೆದಿದೆ. ಇದರ ಮೂಲಕ ಬನಾಯಕರು ಡಿಕೆಶಿ ಅವರು ಸಿಎಂ ಆಗಲ್ಲ. ಅವರ ಕೈಗೆ ಚೊಂಬು ಎಂದು ಬಿಜೆಪಿ ಕಾರ್ಯಕರ್ತರು ವ್ಯಂಗ್ಯವಾಡಿದ್ದಾರೆ.
ಜನರ ಕಿವಿಗೆ ಹೂ ಗ್ಯಾರಂಟಿ
ಬಳಿಕ ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ರೆ ಜನರ ಕ್ಷೇಮಕ್ಕೆ ಒಳ್ಳೆಯದು ಎಂಬುದನ್ನು ಪ್ರಶ್ನಿಸಿದಾಗ ಗಿಣಿ “ಹೂ” ಕಾರ್ಡ್ ತೆಗೆದುಕೊಂಡಿತು. “ಸಿದ್ದರಾಮಯ್ಯ ಸಿಎಂ ಆದ್ರೆ ಜನರ ಕಿವಿಗೆ ಹೂ ಗ್ಯಾರಂಟಿ” ಎಂದು ವಿಡಂಬನೆ ಮಾಡಿದ್ದಾರೆ.
ಇದನ್ನು ನೋಡಿ : ಸಿದ್ದು ಟೀಂನಿಂದಲೂ ನಂಬರ್ ಗೇಮ್?- ರಹಸ್ಯವಾಗಿ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿಯಾದ ಯತೀಂದ್ರ




