Shubman Gill : ಭಾರತ ತಂಡದ ನಾಯಕ ಶುಭ್ಮನ್ ಗಿಲ್ (Shubman Gill) ಮತ್ತೆ ಕಣಕ್ಕಿಳಿಯಲು ಮುಂದಿನ ವರ್ಷದವರೆಗೆ ಕಾಯಬೇಕಿದೆ.

ಭಾರತ ತಂಡದ ನಾಯಕ ಶುಭ್ಮನ್ ಗಿಲ್ (Shubman Gill) ನರಗಳಲ್ಲಿ ಸೆಳೆತ (Nerve Strain) ಸಮಸ್ಯೆಯಿಂದ ಬಳಲುತ್ತಿದ್ದು, ಮುಂದಿನವರ್ಷದವರೆಗೂ ಪಂದ್ಯಗಳಲ್ಲಿ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ. ಈ ಕಾರಣದಿಂದ ಗಿಲ್ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಳಿಂದ ಹೊರಗುಳಿದಿದ್ದಾರೆ.
ಖ್ಯಾತ ವೈದ್ಯ ಡಾ. ಅಭಯ್ ನೇನೆ ಅವರಿಂದ ಚಿಕಿತ್ಸೆ
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಕುತ್ತಿಗೆ ನೋವಿನಿಂದ ಅರ್ಧಕ್ಕೆ ಮೈದಾನ ತೊರೆದ ಗಿಲ್, ನಂತರ ಕೊಲ್ಕತ್ತಾದ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕ್ಯಾನಿಂಗ್ ರಿಪೋರ್ಟ್ನಲ್ಲಿ ನರಗಳಲ್ಲಿ ಸೆಳೆತ ದೃಢಪಟ್ಟಿದ್ದು, ಮುಂಬೈನ ಖ್ಯಾತ ವೈದ್ಯ ಡಾ. ಅಭಯ್ ನೇನೆ ಅವರಿಂದ ಚಿಕಿತ್ಸೆ ಪಡೆದಿದ್ದಾರೆ.
ಇದನ್ನು ಓದಿ : Naga Chaitanya : ತೆಲುಗು ಸೂಪರ್ ಸ್ಟಾರ್ ನಾಗಚೈತನ್ಯ ಹುಟ್ಟುಹಬ್ಬ
ಅಭಯ್ ನೇನೆ ಅವರು ಕೂಡ ಶುಭ್ಮನ್ ಗಿಲ್ ಅವರು ನರಗಳ ಸೆಳೆತದಿಂದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ನ್ಯೂಝಿಲೆಂಡ್ ವಿರುದ್ಧದ ಸರಣಿಯ ಮೂಲಕ ಮರಳುವ ಸಾಧ್ಯತೆ
ಅಲ್ಲದೆ ಮುಂದಿನ ವರ್ಷ ಜನವರಿ 11 ರಿಂದ ಶುರುವಾಗಲಿರುವ ನ್ಯೂಝಿಲೆಂಡ್ ವಿರುದ್ಧದ ಸರಣಿಯ ಮೂಲಕ ಶುಭ್ಮನ್ ಗಿಲ್ ಮತ್ತೆ ಮರಳುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಭಾರತ ತಂಡದಿಂದ ಗಿಲ್ ಹೊರಗುಳಿಯುವುದು ಬಹುತೇಕ ಖಚಿತ ಎಂದೇ ಹೇಳಬಹುದು.
ಇದನ್ನು ನೋಡಿ : ಸಕ್ಕರೆ ನಾಡಿನ ಜನರ ಮನಸೂ ಸಿಹಿ, ದಾಖಲೆ ಬರೆದ ರಕ್ತ ಸಂಗ್ರಹ; ಮಂಡ್ಯದಲ್ಲಿದೆ ರಕ್ತದಾನಿಗಳ ದಂಡು!




