Cabinet Reshuffle : ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಭಾರೀ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ಇದೀಗ ಬಿಹಾರ ಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಹಾರಿದ್ದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

Cabinet Reshuffle: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಎರಡೂವರೆ ವರ್ಷ ಕಳೆದಿರುವ ಹೊತ್ತಿಗೆ, ಬಹು ದಿನಗಳಿಂದ ಕೇಳಿಬರುತ್ತಿದ್ದ ಸಚಿವ ಸಂಪುಟ ಪುನರ್ರಚನೆಗೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿಸಿರುವ ಸುದ್ದಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ
ಸಿಎಂ ಸಿದ್ದರಾಮಯ್ಯ ಅವರು ಪದೇ–ಪದೇ ಸಂಪುಟ ಪುನರ್ರಚನೆ ಬಗ್ಗೆ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿದ್ದು, ಈ ಭೇಟಿ ಸಂಪೂರ್ಣ ಯಶಸ್ವಿಯಾಗಿದ್ದು, ಸಂಪುಟ ‘ಸರ್ಜರಿ’ಗೆ ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಹುಲ್ ಗಾಂಧಿ ಪುನರ್ರಚನೆಗೆ ಅನುಮೋದನೆ ನೀಡಿರುವುದಾಗಿ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ : Karnataka Politics: ಸಿದ್ದರಾಮಯ್ಯ-ಡಿಕೆಶಿ ನವೆಂಬರ್ 15ಕ್ಕೆ ದೆಹಲಿ ಭೇಟಿ..!
ಹಾಲಿ ಸಚಿವರಲ್ಲಿ ಆತಂಕ, ಆಕಾಂಕ್ಷಿಗಳಲ್ಲಿ ಹುರುಪು
ಪುನರ್ರಚನೆ ಸುದ್ದಿ ಹೊರಬಿದ್ದ ಕೂಡಲೇ ಸಚಿವ ಆಕಾಂಕ್ಷಿಗಳಲ್ಲಿ ಲಾಬಿ ಜೋರಾಗಿದೆ. ಮತ್ತೊಂದೆಡೆ, ಕೆಲ ಹಾಲಿ ಸಚಿವರಲ್ಲಿ ನಡುಕ ಮನೆಮಾಡಿದೆ.
ಹೈಕಮಾಂಡ್ ಕನಿಷ್ಠ 10 ರಿಂದ ಗರಿಷ್ಠ 15 ಸಚಿವರನ್ನು ಕೈ ಬೀಳಿಸುವ ಸಾಧ್ಯತೆ ಇರುವುದಾಗಿ ಮೂಲಗಳು ತಿಳಿಸುತ್ತಿವೆ.
ಯುವ ಮುಖಗಳಿಗೆ ಅವಕಾಶ?
ಸಂಪುಟಕ್ಕೆ ಹೊಸ ಮುಖಗಳನ್ನೂ, ವಿಶೇಷವಾಗಿ ಯುವ ನಾಯಕರಿಗೆ ಅವಕಾಶ ನೀಡುವ ಮನವಿ ಹೈಕಮಾಂಡ್ ಮಟ್ಟದಲ್ಲಿ ಬಲವಾಗಿದೆ. ಹಿರಿಯ ಮತ್ತು ಅನುಭವಿಗಳಾದ ಕೆಲವರನ್ನು ಪಕ್ಷ ಸಂಘಟನೆಯಲ್ಲಿ ಬಳಸಿಕೊಳ್ಳುವ ಮಾಸ್ಟರ್ಪ್ಲಾನ್ ಕೂಡ ಚರ್ಚೆಯಲ್ಲಿದೆ.
ಸಂಪುಟ ಸರ್ಜರಿಯಿಂದ ಆಡಳಿತಕ್ಕೆ ವೇಗ?
ರಾಜ್ಯದ ಆಡಳಿತಕ್ಕೆ ಹೊಸ ಚೈತನ್ಯ ನೀಡಲು, ಕೆಲ ಸಚಿವರ ಕಾರ್ಯ ಶೈಲಿಯ ಬಗ್ಗೆ ವ್ಯಕ್ತವಾಗಿರುವ ಅಸಮಾಧಾನ ನಿವಾರಣೆಗೆ ಈ ‘ಮೇಜರ್ ಸರ್ಜರಿ’ ಅನಿವಾರ್ಯ ಎಂಬ ವಾದವನ್ನು ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಬಲವಾಗಿ ಮಂಡಿಸಿದ್ದಾರಂತೆ.
MUST WATCH: ರಾಜ್ಯದಲ್ಲಿ CM ಕುರ್ಚಿಗಾಗಿ ಫೈಟ್ – DK SHIVAKUMARಗೆ ಒಲಿಯುತ್ತಾ CM ಪಟ್ಟ..?




