Karnataka Politics : ನವೆಂಬರ್ 15ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿ ದಂಡಯಾತ್ರೆಗೆ ಸಜ್ಜಾಗ್ತಿದ್ದಾರೆ. ನವೆಂಬರ್ ಕ್ರಾಂತಿ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಡೆಲ್ಲಿಗೆ ಅಂಗಳಕ್ಕೆ ಪವರ್ ಶೇರಿಂಗ್ ಆಟ ಶಿಫ್ಟ್ ಆಗ್ತಿದೆ.

Karnataka Politics: ಕರ್ನಾಟಕ ರಾಜಕೀಯದಲ್ಲಿ ನವೆಂಬರ್ ಮಧ್ಯಂತರದಲ್ಲೇ ಕುತೂಹಲಕಾರಿ ಬೆಳವಣಿಗೆಗಳು ಗಮನ ಸೆಳೆಯುತ್ತಿವೆ. ಕಾಂಗ್ರೆಸ್ ಒಳಗಿನ ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ವಿಚಾರಗಳಲ್ಲಿ ರಾಜ್ಯ ರಾಜಕೀಯವು ಈಗ ಮೌನ ಸ್ಥಿತಿಯಲ್ಲಿದೆ.
ಸಿಎಂ, ಡಿಸಿಎಂ ನವೆಂಬರ್ 15ಕ್ಕೆ ದೆಹಲಿಗೆ
ನವೆಂಬರ್ 15ರಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ದೆಹಲಿ ಭೇಟಿ ತೆರಳಲಿದ್ದು, ಪುನಾರಚನೆಗೆ ಸಂಬಂಧಿಸಿದ ಪ್ರಮುಖ ತೀರ್ಮಾನಗಳಿಗೆ ಹೈಕಮಾಂಡ್ ಅವರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಉಂಟು.

ಕಪಿಲ್ ಸಿಬಲ್ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಕಪಿಲ್ ಸಿಬಲ್ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ಈ ಭೇಟಿ ನಿಗದಿಯಾಗಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿ ಅಂಗಳದಲ್ಲಿ ಒಟ್ಟಾಗಿ ಇರಲಿದ್ದಾರೆ.
ಇದನ್ನೂ ಓದಿ: ನಾಯಕತ್ವ ಬದಲಾವಣೆನಾ? ಸಂಪುಟ ವಿಸ್ತರಣೆನಾ? ಸಿಎಂ ಹೇಳಿಕೆಗೆ ರಾಜಕೀಯದಲ್ಲಿ ಕುತೂಹಲ..!
ಸಿದ್ದರಾಮಯ್ಯ-ಡಿಕೆಶಿ ನಡುವೆ ಸಂಪುಟ ಪುನಾರಚನೆಯ ಕದನ
ಸಿದ್ದರಾಮಯ್ಯ ಈ ಭೇಟಿಯ ಸಮಯದಲ್ಲಿ ಸಂಪುಟ ಪುನಾರಚನೆಗೆ ದಾಳಿ ಹಾಕಲು ಯೋಜನೆ ಮಾಡುತ್ತಿದ್ದಾರೆ. ಇದನ್ನು ಬೆಳಗಾವಿ ಅಧಿವೇಶನದ ಮೊದಲು ಪೂರ್ಣಗೊಳಿಸಲು ಸಿಎಂ ದೃಢ ನಿರ್ಧಾರ ಹೊಂದಿದ್ದಾರೆ.
ಡಿಕೆಶಿ ವಿರೋಧದಲ್ಲೂ ಸಿದ್ದರಾಮಯ್ಯ ಪುನಾರಚನೆಗೆ ಹೋರಾಟ:
ಆದರೆ ಪುನಾರಚನೆಗೆ ಸಂಬಂಧಿಸಿದಂತೆ ಡಿಕೆಶಿ ಮನೋಭಾವ ವಿಭಿನ್ನವಾಗಿದೆ. ಪುನಾರಚನೆಗೆ ಒಪ್ಪಿದರೆ ತಮ್ಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯತೆ ಕಡಿಮೆ ಎಂದು ಅವರು ಲೆಕ್ಕ ಹಾಕುತ್ತಿದ್ದಾರೆ.
ನವೆಂಬರ್ ಕ್ರಾಂತಿಯ ಮುನ್ಸೂಚನೆನಾ?
5 ತಿಂಗಳ ಹಿಂದೆ ಹೈಕಮಾಂಡ್ ಬಳಿ ಪುನಾರಚನೆ ಕುರಿತು ಚರ್ಚೆ ನಡೆಸಿದ್ದ ಸಿದ್ದರಾಮಯ್ಯ ಈಗ ಅದೇ ಅಸ್ತ್ರವನ್ನು ಪ್ರಯೋಗಿಸುತ್ತಿರುವುದು ಗಮನಾರ್ಹ.
MUST WATCH: ರಾಜ್ಯದಲ್ಲಿ CM ಕುರ್ಚಿಗಾಗಿ ಫೈಟ್ – DK SHIVAKUMARಗೆ ಒಲಿಯುತ್ತಾ CM ಪಟ್ಟ..?




