Accident : ಸರ್ಕಾರಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಸುಮಾರು 15 ಜನ ಗಾಯಗೊಂಡಿದ್ದು, ಬಸ್ ಚಾಲಕ ಸ್ಥಿತಿ ಗಂಭೀರವಾಗಿರುವ ಘಟನೆ ಅರಸೀಕೆರೆ ನಡೆದಿದೆ.

Accident : ಸರ್ಕಾರಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಸುಮಾರು 15 ಜನ ಗಾಯಗೊಂಡಿದ್ದು, ಬಸ್ ಚಾಲಕ ಸ್ಥಿತಿ ಗಂಭೀರವಾಗಿರುವ ಘಟನೆ ಅರಸೀಕೆರೆ ತಾಲೂಕಿನ ಬೋರಿನ ಕೊಪ್ಪಲು ಬಳಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ KSRTC ಬಸ್
ಅರಸೀಕೆರೆ ತಾಲೂಕಿನ ಬೋರಿನ ಕೊಪ್ಪಲು ಹತ್ತಿರ ಅರಸೀಕೆರೆಯಿಂದ ಹಾಸನಕ್ಕೆ ಹೋಗುತ್ತಿದ್ದ ಸರಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು, ಸುಮಾರು 15 ಜನ ಗಾಯಗೊಂಡಿದ್ದಾರೆ. ಇನ್ನು ಗಾಯಾಳುಗಳನ್ನು ಅರಸೀಕೆರೆ ತಾಲೂಕಿನ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೀಡಲಾಗುತ್ತಿದೆ. ಸುಮಾರು ಜನರ ಸ್ಥಿತಿ ಗಂಭೀರವಾಗಿದ್ದು, ಹಾಸನ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
ಇದನ್ನು ಓದಿ : ಮಹಿಳೆಯೊಂದಿಗೆ ಜಗಳವಾಡಿದ ಪಕ್ಷಿ – Social Media ದಲ್ಲಿ Viral
ಶಾಸಕ ಶಿವಲಿಂಗೇಗೌಡ ಆಸ್ಪತ್ರೆಗೆ ಭೇಟಿ
ಈ ಅಪಘಾತ ತಿಳಿದು ತಕ್ಷಣ ಶಾಸಕ ಕೆ ಎಂ ಶಿವಲಿಂಗೇಗೌಡ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯವನ್ನು ವಿಚಾರಿಸಿ, ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಹಾಸನದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಎಂ ಸಮಿಉಲ್ಲಾ ಅಪಘಾತ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ, ಅಪಘಾತಕ್ಕೀಡಾದ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಧೈರ್ಯ ಹೇಳಿ ಸಹಾಯಕ್ಕೆ ಮುಂದಾದರು.
ಗಾಯಾಳುಗಳನ್ನು ಹಾಸನಕ್ಕೆ ರವಾನಿಸಲು MLA ಸದಸ್ಯರಾದ ದರ್ಶನ್ ಹರೀಶ್ ನಗರಸಭೆ ಉಪಾಧ್ಯಕ್ಷರಾದ ಮನೋಹರ್ ಅಮ್ಜದ್ ಸುಹಿಲ್ ಹಾಗೂ ಸ್ಥಳೀಯರು ಸಹಕರಿಸಿದರು.
ಇದನ್ನು ನೋಡಿ : KSRTC BUS STAND ಗೆ LOKA VISIT – ಪಾನ್ ಪರಾಗ್ ಮಾಡ್ತಿದ್ದವರಿಗೆ ವಾರ್ನಿಂಗ್




