Viral News : ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳೇ ಲೇಸು. ಒಂದು ತುತ್ತು ಅನ್ನ ಹಾಕಿದರೆ ಸಾಕು, ಜೀವಂತ ಪರ್ಯಂತ ನೆನಪಿನಲ್ಲಿಟ್ಟುಕೊಳ್ಳುತ್ತವೆ.

ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳೇ ಲೇಸು. ಒಂದು ತುತ್ತು ಅನ್ನ ಹಾಕಿದರೆ ಸಾಕು, ಜೀವಂತ ಪರ್ಯಂತ ನೆನಪಿನ ಲ್ಲಿಟ್ಟುಕೊಳ್ಳುತ್ತವೆ.
ತಮ್ಮನ್ನು ಕಾಳಜಿ ವಹಿಸುವ ಜೀವವನ್ನು ಹಚ್ಚಿಕೊಂಡು ಬಿಡುತ್ತವೆ. ಇದೀಗ ಮಾನವ ಹಾಗೂ ಪಕ್ಷಿಯ ಸ್ನೇಹಪರ ಸಂಬಂಧವನ್ನು ತೋರಿಸುವ ದೃಶ್ಯವೊಂದು ವೈರಲ್ ಆಗಿದೆ.
ಮಹಿಳೆಯೊಂದಿಗೆ ಜಗಳವಾಡಿದ ಪಕ್ಷಿ
ಮಹಿಳೆಯೊಬ್ಬಳು ಮನೆಯ ಹತ್ತಿರ ಹಾರಿ ಬಂದು ಕುಳಿತಿರುವ ಪಕ್ಷಿಗಳೊಂದಿಗೆ ಸಂಭಾಷಣೆ ನಡೆಸಿದ್ದಾಳೆ. ಪಕ್ಷಿಯೊಂದು ಆಕೆಯ ಮಾತಿಗೆ ಪ್ರತಿಕ್ರಿಯಿಸುತ್ತಾ ಜಗಳಕ್ಕೆ ಇಳಿದ್ದಂತಿದೆ ಈ ದೃಶ್ಯ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ Social Media ದಲ್ಲಿ Viral ಆಗಿದೆ.
@shaheena451 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ ಹಕ್ಕಿ ಭಯಪಡುವ ಬದಲು ತನ್ನ ಅಧಿಕಾರವನ್ನು ಪ್ರತಿಪಾದಿಸುವಷ್ಟು ನಂಬಿಕೆಯನ್ನು ಸಹೋದರಿ ಹೇಗೆ ಗಳಿಸಿದಳು?, ತುಂಬಾ ಸುಂದರವಾಗಿದೆ. ಅವಳು ಪ್ರಕೃತಿಯನ್ನೇ ಗೆದ್ದಿದ್ದಾಳೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಇದನ್ನು ನೋಡಿ : KSRTC BUS STAND ಗೆ LOKA VISIT – ಪಾನ್ ಪರಾಗ್ ಮಾಡ್ತಿದ್ದವರಿಗೆ ವಾರ್ನಿಂಗ್
ವೈರಲ್ ವಿಡಿಯೋದಲ್ಲಿ ಏನಿದೆ?
ಈ ವಿಡಿಯೋದಲ್ಲಿ ಮನೆಯ ಬಾಲ್ಕನಿಯಲ್ಲಿ ಹಕ್ಕಿಗಳು ಬಂದು ಕುಳಿತಿರುವುದನ್ನು ನೋಡಬಹುದು. ಅದರಲ್ಲಿ ಒಂದು ಪಕ್ಷಿ ಮಹಿಳೆಯೊಂದಿಗೆ ಮುದ್ದಾಗಿ ಸಂಭಾಷಣೆ ನಡೆಸುವುದನ್ನು ಕಾಣಬಹುದು. ಪಕ್ಷಿಯು ಮಹಿಳೆಯ ಮೇಲೆ ಪ್ರೀತಿಯನ್ನು ತೋರುತ್ತಾ ಆಕೆಯ ಮುಂದೆಯೇ ಕುಳಿತು ಏನೋ ಹೇಳುವುದನ್ನು ಕಾಣಬಹುದು.
ಆದರೆ ಈ ಮಹಿಳೆ ಮಾತ್ರ ಧ್ವನಿ ಏರಿಸಿ ಮಾತನಾಡುತ್ತಾಳೆ. ತನ್ನ ಕೈಯಿಂದ ಅದನ್ನು ತಳ್ಳುತ್ತಾಳೆ. ಇದರಿಂದ ಹಕ್ಕಿಯೂ ಕೂಡ ಕೋಪವನ್ನು ವ್ಯಕ್ತಪಡಿಸುವಂತೆ ಈ ದೃಶ್ಯವಿದೆ.
ತನ್ನದೇ ಭಾಷೆಯಲ್ಲಿ ಬೈಯಲು ಶುರುವಿಟ್ಟ ಪಕ್ಷಿಯ ಕೋಪವನ್ನು ಅರಿತುಕೊಂಡ ಮಹಿಳೆಯೂ ಬಾಯಿಮುಚ್ಚುವಂತೆ ಗದರುವುದನ್ನು ನೋಡಬಹುದು.
ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ
ನವೆಂಬರ್ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ.
ಹೃದಯ ಸ್ಪರ್ಶಿ ದೃಶ್ಯ ಎಂದರೆ, ಮತ್ತೊಬ್ಬರು ಈ ಪ್ರಾಣಿ ಪಕ್ಷಿಗಳೊಂದಿಗೆ ನೀವು ಬೆರೆತರೆ ಅವು ನಿಮ್ಮೊಂದಿಗೆ ಬೆರೆತು ಹೋಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ : Tumakuru : ಚಾಕುವಿನಿಂದ ಚುಚ್ಚಿ ಯುವಕನ ಭೀಕರ Murder




