Murder : ಚಾಕುವಿನಿಂದ ಚುಚ್ಚಿ ಯುವಕನನ್ನು ಭೀಕರ ಕೊಲೆ ಮಾಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

Murder : ಚಾಕುವಿನಿಂದ ಚುಚ್ಚಿ ಯುವಕನೋರ್ವನ ಭೀಕರ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಜಯನಗರದ ಮಂಜುನಾಥ ನಗರದಲ್ಲಿ (Manjunatha Nagara) ಸಂಭವಿಸಿದೆ.
ಇದನ್ನು ಓದಿ : Saalumarada Thimmakka : ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಇನ್ನಿಲ್ಲ
Murder – ಚಾಕುವಿನಿಂದ ಚುಚ್ಚಿ ಕೊಲೆ
ಮೃತ ದುರ್ದೈವಿಯನ್ನುಅಭಿಷೇಕ್ (26) ಎಂದು ಗುರುತಿಸಲಾಗಿದೆ. ಕ್ಯಾತಸಂದ್ರ ಬಳಿಯ ಸುಭಾಷ್ ನಗರ ನಿವಾಸಿಯಾಗಿರುವ ಅಭಿಷೇಕ್ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಘಟನಾ ಸ್ಥಳಕ್ಕೆ ಜಯನಗರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಪ್ರಕರಣ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮೃತದೇಹವನ್ನು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಗಾರರಿಗೆ ರವಾನಿಸಲಾಗಿದೆ.
ಇದನ್ನು ನೋಡಿ : KN RAJANNA | ನಾನು ಹುಡುಗ ಆಗಿದ್ದಾಗ ಬೈದ್ರೆ ಹುಡುಕಿಕೊಂಡು ಹೋಗಿ ಹೊಡಿತ್ತಿದ್ದೆ




