Viral News : ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಮದುವೆಯೊಂದು ರಕ್ತಪಾತದ ಕಣವಾಗಿ ಮಾರ್ಪಟ್ಟಿದೆ.

ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಮದುವೆಯೊಂದು ರಕ್ತಪಾತದ ಕಣವಾಗಿ ಮಾರ್ಪಟ್ಟಿದೆ. ವೇದಿಕೆಯ ಮೇಲೆ ವರನಿಗೆ ಚಾಕುವಿನಿಂದ ಇರಿದ್ದಿದ್ದಾನೆ ವ್ಯಕ್ತಿ. ದೊಡ್ಡ ಕಾಂಪೌಂಡಿನಲ್ಲಿ ಓಪನ್ ಸ್ಪೇಸ್ನಲ್ಲಿ ನಡೆಯುತಿದ್ದ ಮದುವೆಯಲ್ಲಿ ಈ ಘಟನೆ ನಡೆದಿದೆ.
ಚಾಕು ಇರಿದು ಪರಾರಿ
ಅಮರಾವತಿ ನಗರದ ಬಡನೆರ ರಸ್ತೆಯಲ್ಲಿರುವ ಸಹಿಲ್ ಲಾನ್ನಲ್ಲಿ 22 ವರ್ಷದ ಸುಜಲ್ ರಾಮ್ ಸಮುದ್ರ ಅವರ ವಿವಾಹ ಮಹೋತ್ಸವ ಜರುಗಿತ್ತು. ಕಾಂಪೌಂಡ್ ಹೊರಗೆ ರಾತ್ರಿ 9.30ರ ಸುಮಾರಿಗೆ ಸ್ನೇಹಿತನ ಜೊತೆ ಬೈಕಿನಲ್ಲಿ ಹಂತಕನ ಪ್ರವೇಶ ಆಗಿತ್ತು. ಕಾಂಪೌಂಡ್ ಪ್ರವೇಶಿಸಿದ ಆರೋಪಿ ರಾಘೋ ಜಿತೇಂದ್ರ ಬಕ್ಷಿ ನೇರವಾಗಿ ಮದುವೆಯ ವಧು-ವರ ನಿಂತಿದ್ದ ವೇದಿಕೆಗೆ ನುಗ್ಗಿದವನೇ ಚಾಕುವಿನಿಂದ ಇರಿದಿದ್ದ. ಅಲ್ಲಿ ಏನಾಗ್ತಿದೆ ಅನ್ನೋ ಹೊತ್ತಿಗೆ ಆರೋಪಿ ಅದೇ ಬೈಕ್ ಹತ್ತಿ ಪರಾರಿಯಾಗಿದ್ದ.
ಇದನ್ನು ನೋಡಿ : Bengaluru: ಡೇಟಿಂಗ್ ಆ್ಯಪ್ನಲ್ಲಿ ಗಾಳ; ಸುಂದರಿ ಸ್ನೇಹ ಮಾಡಿ ₹1.29 ಕೋಟಿ ಕಳೆದುಕೊಂಡ ಅಮಾಯಕ
2 ಕಿಮೀ ದೂರದವರೆಗೆ ಆರೋಪಿಯನ್ನು ಚೇಸ್ ಮಾಡಿದ ಡ್ರೋನ್
ಮದುವೆ ಮನೆಯಲ್ಲಿ ಫೋಟೋಗ್ರಫಿ ಮಾಡ್ತಿದ್ದ ವ್ಯಕ್ತಿ ಸಮಯಪ್ರಜ್ಞೆ ಅಚ್ಚರಿ ಮತ್ತು ಮೆಚ್ಚುಗೆಗೆ ಕಾರಣ ಆಗಿದೆ. ತಾನು ನಿಯಂತ್ರಿಸುತ್ತಿದ್ದ ಡ್ರೋನ್ ಅನ್ನು ಓಡಿಹೋಗುತ್ತಿದ್ದ ಆರೋಪಿಯ ಕಡೆಗೆ ತಿರುಗಿಸಿದ್ದ. ಡ್ರೋನ್ ಆ ದಾಳಿಕೋರ ಕಾಂಪೌಂಡಿನಿಂದ ಆಚೆ ಹೋಗಿ ಸ್ನೇಹಿತನ ಬೈಕ್ ಹತ್ತಿ ಪರಾರಿಯಾಗುವುದೆಲ್ಲವನ್ನ ಚಿತ್ರೀಕರಿಸಿದ್ದಾನೆ. ಅಷ್ಟೇ ಅಲ್ಲ, ಅವರ ಬೈಕ್ ಹೋಗಿರುವ ಸುಮಾರು 2 ಕಿಮೀ ದೂರದವರೆಗೆ ಡ್ರೋನ್ ಚೇಸ್ ಮಾಡಿದೆ.
ಡ್ರೋನ್ ಸಹಾಯದಿಂದ ಆರೋಪಿಯ ಗುರುತು ಪತ್ತೆ
ಸದ್ಯ ಡ್ರೋನ್ ವಿಡಿಯೋ ಸಹಾಯದಿಂದ ಆರೋಪಿಯ ಗುರುತು ಪತ್ತೆ ಆಗಿದೆ.. ಬೈಕ್ ನಂಬರ್, ಬೈಕಿನಲ್ಲಿ ಆರೋಪಿಗಳು ಸಾಗಿದ ದಿಕ್ಕು ಪರಿಶೀಲಿಸಿ ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟಿದ್ದಾರೆ.. ಡ್ರೋನ್ ಆಪರೇಟರ್ನ ಕಾರ್ಯವನ್ನ ಶ್ಲಾಘಿಸಿದ್ದಾರೆ. ಇನ್ನು ಹಳೆಯ ದ್ವೇಷವೇ ಚಾಕು ಇರಿತಕ್ಕೆ ಕಾರಣ ಎನ್ನಲಾಗಿದೆ.
ಇದನ್ನು ಓದಿ : Health Tips : ಸೀಬೆ ಎಲೆಗಳ ಟೀ ಕುಡಿಯುವುದರಿಂದ ಲಭಿಸುವ ಪ್ರಯೋಜನ ಅಷ್ಟಿಷ್ಟಲ್ಲ..!




