Guava Leaf Tea : ಪೇರಳೆ ಎಲೆಗಳು ಹಲವಾರು ಆರೋಗ್ಯ ಲಾಭಗಳನ್ನು ನೀಡುವ ಪ್ರಕೃತಿಯ ಅದ್ಭುತ ಔಷಧಿ ಎಂದು ಹೇಳಬಹುದು.

ಪೇರಳೆ ಎಲೆಗಳು ಹಲವಾರು ಆರೋಗ್ಯ ಲಾಭಗಳನ್ನು ನೀಡುವ ಪ್ರಕೃತಿಯ ಅದ್ಭುತ ಔಷಧಿ ಎಂದು ಹೇಳಬಹುದು. ಇವುಗಳಲ್ಲಿ ಉತ್ಕರ್ಷಣ ನಿರೋಧಕ (Antioxidants), ಉರಿ ನಿವಾರಕ (Anti-inflammatory) ಹಾಗೂ ಬ್ಯಾಕ್ಟೀರಿಯಾ ವಿರೋಧಿ (Antibacterial) ಗುಣಲಕ್ಷಣಗಳಿವೆ. ಜೊತೆಗೆ ಪ್ರೋಟೀನ್, ವಿಟಮಿನ್ C, B, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೇಶಿಯಂ, ಪೊಟ್ಯಾಸಿಯಂ ಹಾಗೂ ಫ್ಲೇವನಾಯ್ಡ್ ಮುಂತಾದ ಪೋಷಕಾಂಶಗಳಿಂದ ಸಮೃದ್ಧವಾಗಿವೆ.
ಆರೋಗ್ಯ ತಜ್ಞರ ಪ್ರಕಾರ, ದಿನನಿತ್ಯ ಜೀವನದಲ್ಲಿ ಪೇರಳೆ ಎಲೆಗಳನ್ನು ಬಳಕೆ ಮಾಡುವುದು ಶರೀರಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ.
ಇದನ್ನು ಓದಿ : ಜಾಲಹಳ್ಳಿ Fly Over ನ ಪಿಲ್ಲರ್ನಲ್ಲಿ ಕುಳಿತ ಯುವಕ, ಅಲ್ಲಿಗೆ ಹೇಗೆ ಹೋದ ?
ಪೇರಳೆ ಎಲೆ ಚಹಾ ತಯಾರಿಸುವ ವಿಧಾನ:
5 ಪೇರಳೆ ಎಲೆಗಳನ್ನು ಚೆನ್ನಾಗಿ ತೊಳೆಯಿರಿ.
2 ಕಪ್ ನೀರನ್ನು ಪಾತ್ರೆಯಲ್ಲಿ ಕುದಿಸಿ.
ಕುದಿಯುತ್ತಿರುವ ನೀರಿನಲ್ಲಿ ಪೇರಳೆ ಎಲೆಗಳನ್ನು ಹಾಕಿ 10-12 ನಿಮಿಷ ಕುದಿಸಿ.
ನಂತರ ನೀರನ್ನು ಶುದ್ಧಗೊಳಿಸಿ ಬಿಸಿಯಾಗಿರುವಾಗ ನಿಂಬೆ ರಸ ಅಥವಾ ಜೇನುತುಪ್ಪ ಸೇರಿಸಿ ಸೇವಿಸಬಹುದು.
ಪೇರಳೆ ಎಲೆ ಚಹಾದ ಆರೋಗ್ಯ ಪ್ರಯೋಜನಗಳು:
- ದೃಷ್ಟಿ ಮತ್ತು ಚರ್ಮದ ಆರೋಗ್ಯ ಸುಧಾರಣೆ
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
- ಹೊಟ್ಟೆ ಉರಿ, ಗ್ಯಾಸ್ ಮತ್ತು ಆಮ್ಲೀಯತೆ ನಿವಾರಣೆ
- ಇನ್ಸುಲಿನ್ ಪ್ರತಿರೋಧ ಕಡಿಮೆ ಮಾಡುವಲ್ಲಿ ಸಹಾಯಕ
- ಕೊಬ್ಬು ಕರಗಿಸಲು ನೆರವಾಗುತ್ತದೆ
- ಮಧುಮೇಹ ನಿಯಂತ್ರಣಕ್ಕೆ ಸಹಕಾರಿ
- ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ
- ಪುರುಷರ ಸಂತಾನೋತ್ಪತ್ತಿ ಆರೋಗ್ಯ ಸುಧಾರಣೆ
ತಜ್ಞರ ಸಲಹೆ
ನಿತ್ಯ ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಒಂದು ಕಪ್ ಪೇರಳೆ ಎಲೆ ಚಹಾ ಸೇವಿಸುವುದರಿಂದ ದೇಹದ ಶಕ್ತಿ, ರೋಗನಿರೋಧಕ ಸಾಮರ್ಥ್ಯ ಮತ್ತು ಒಟ್ಟಾರೆ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಕಂಡುಬರುತ್ತದೆ.
ಇದನ್ನು ನೋಡಿ : ‘ನಾವು ರೆಡಿ ಇಲ್ಲ..’ ಕೋಚ್ ಗಂಭೀರ್ ಸ್ಫೋಟಕ ಹೇಳಿಕೆ..!




