Suicide : ಕಲಾಸಿಪಾಳ್ಯದಲ್ಲಿ ಬಾಲಕಿಯೊಬ್ಬಳು ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

Suicide : ಕಲಾಸಿಪಾಳ್ಯದಲ್ಲಿ (Kalasipalya) ಬಾಲಕಿಯೊಬ್ಬಳು ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಶರಣಾದ ಬಾಲಕಿಯನ್ನು ಶರ್ಮಿಳಾ (16) ಎಂದು ಗುರುತಿಸಲಾಗಿದೆ.
ಇದನ್ನು ನೋಡಿ : ವೇಯ್ಟರ್ ಮೇಲೆ ಬಿಸಿ ಬಿಸಿ ಕಾಫಿ ಎರಚಿದ ಮಹಿಳೆ, ಅಷ್ಟಕ್ಕೂ ಆತ ಮಾಡಿದ ತಪ್ಪೇನು?
ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಶರ್ಮಿಳಾ ತಂದೆ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಪೋಷಕರು ತಮಿಳುನಾಡಿನ ದೇವಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರಕರಣ ದಾಖಲು
ಇನ್ನು ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸ್ಥಳಕ್ಕೆ ಕಲಾಸಿಪಾಳ್ಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣವನ್ನು ಅಸಹಜ ಸಾವು ಪ್ರಕರಣವಾಗಿ ದಾಖಲಿಸಲಾಗಿದೆ. ಶರ್ಮಿಳಾ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಇದನ್ನು ಓದಿ : Vijayapura : ಕಲ್ಲಿನಿಂದ ತಲೆ ಜಜ್ಜಿ ಅರ್ಚಕನ ಬರ್ಬರ ಹತ್ಯೆ




