Vijayapura Murder : ಮೋಘಸಿದ್ಧ ದೇವಸ್ಥಾನದ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನನ್ನು ಕಲ್ಲಿನಿಂದ ತಲೆ ಜಜ್ಜಿ ಬರ್ಬರನಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಅರಕೇರಿ ಗ್ರಾಮದ ಅಮೋಘಸಿದ್ಧ ದೇವಸ್ಥಾನದ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಯುವಕನನ್ನು ಭಾನುವಾರ (ನೆನ್ನೆ) ತಡರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಯುವಕನ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನು ನೋಡಿ : ಬೆಂಗಳೂರಿನ ಹೊಸಕೆರೆಹಳ್ಳಿ ಫ್ಲೈಓವರ್ ಸಂಚಾರಕ್ಕೆ ಸಿದ್ಧ – ಈ ವಾರವೇ ಲೋಕಾರ್ಪಣೆ ಸಾಧ್ಯತೆ
ದೇವಸ್ಥಾನದ ಬಳಿಯೇ ಹತ್ಯೆ
ಹತ್ಯೆಯಾದ ಅರ್ಚಕನನ್ನು ಅಮಸಿದ್ಧ ಬಿರಾದಾರ (35) ಎಂದು ಗುರುತಿಸಲಾಗಿದ್ದು, ಅಮೋಘಸಿದ್ಧ ದೇವಸ್ಥಾನದ ಬಳಿಯೇ ಹತ್ಯೆ ಮಾಡಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸ್ ತಂಡ ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಘಟನೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನು ಪೋಲೀಸರು ಆರೋಪಿಯನ್ನು ಪತ್ತೆ ಹಚ್ಚಲು ಪರಿಶೀಲನೆ ಮತ್ತು ತನಿಖೆ ಪ್ರಾರಂಭಿಸಿದ್ದಾರೆ.
ಇದನ್ನು ಓದಿ : Parappana Agrahara ರಾಜಾತಿಥ್ಯ ಪ್ರಕರಣ – ಮೂವರು ಅಧಿಕಾರಿಗಳನ್ನು ಅಮಾನತು




