Rain Alert : ರಾಜ್ಯದಲ್ಲಿ ಈಶಾನ್ಯ ಮಾನ್ಸೂನ್ ಅಬ್ಬರ ಕಡಿಮೆಯಾಗಿದ್ದು, ಚಳಿಗಾಲ ಆರಂಭವಾಗುವ ಸೂಚನೆ ಸಿಕ್ಕಿದೆ.

Rain Alert : ರಾಜ್ಯದಲ್ಲಿ ಈಶಾನ್ಯ ಮಾನ್ಸೂನ್ ಅಬ್ಬರ ನಿಧಾನವಾಗಿ ಶಮನಗೊಂಡಿದೆ. ಚಳಿಗಾಲ ಆರಂಭವಾಗುವ ಲಕ್ಷಣಗಳು ಕಂಡುಬರುತ್ತಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ಬಹುತೇಕ ಕಡೆ ಒಣ ಹವೆ
ಇಂದು (ನವೆಂಬರ್ 10) ಕರ್ನಾಟಕದ ಬಹುತೇಕ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಆದರೆ ನವೆಂಬರ್ 11ರಿಂದ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಹವಾಮಾನ ಇಲಾಖೆ (Karnataka Weather) ಹೇಳಿದೆ.
ಕರಾವಳಿ ಮತ್ತು ಒಳನಾಡಿನ ಹವಾಮಾನ ಸ್ಥಿತಿ
ಭಾನುವಾರ ಕರಾವಳಿಯಲ್ಲಿ ಈಶಾನ್ಯ ಮಾನ್ಸೂನ್ ಸಾಮಾನ್ಯವಾಗಿತ್ತು, ಆದರೆ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿಯ ಕೆಲವೆಡೆ ಮಳೆಯಾದರೆ, ಉತ್ತರ ಒಳನಾಡಿನಲ್ಲಿ ಒಣ ಹವೆ ದಾಖಲಾಗಿತ್ತು.
ಇದನ್ನು ಓದಿ : BBK 12 : ಬಿಗ್ ಬಾಸ್ ಮನೆಯಿಂದ ಚಂದ್ರಪ್ರಭ ಔಟ್
ಅತಿ ಹೆಚ್ಚು ಮಳೆ
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಅಲ್ಲಿ 12 ಸೆಂ.ಮೀ. ಮಳೆ ದಾಖಲಾಗಿದೆ. ರಾಜ್ಯದ ಇತರ ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ.

ಕನಿಷ್ಠ ತಾಪಮಾನ ವಿಜಯಪುರದಲ್ಲಿ 12° C
ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ವಿಜಯಪುರದಲ್ಲಿ ದಾಖಲಾಗಿದ್ದು, ಇದು ಈ ಚಳಿಗಾಲದ ಆರಂಭದ ಸ್ಪಷ್ಟ ಸೂಚನೆಯಾಗಿದೆ.
ಬೆಂಗಳೂರು ಹವಾಮಾನ
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಮುಖ್ಯವಾಗಿ ನಿರ್ಮಲ ಆಕಾಶವಿರಲಿದೆ. ಕೆಲವು ಕಡೆಗಳಲ್ಲಿ ಮುಂಜಾನೆ ಮಂಜು (Fog) ಕಾಣುವ ಸಾಧ್ಯತೆ ಇದೆ.
- ಕನಿಷ್ಠ ತಾಪಮಾನ: 17° C
- ಗರಿಷ್ಠ ತಾಪಮಾನ: 28° C
ಒಣ ಹವೆ ಮುಂದುವರಿಯಲಿದೆ
ಇದು ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಮಳೆಯ ಸಾಧ್ಯತೆ ಅತ್ಯಲ್ಪವಾಗಿರುವುದರಿಂದ ಮೀನುಗಾರರಿಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ.

ಇದನ್ನು ನೋಡಿ : Ragging Case: ಮೈಸೂರಿನ ಶಾಲೆಯಲ್ಲಿ ಹುಡುಗನ ಮೇಲೆ ಬರ್ಬರ ರ್ಯಾಗಿಂಗ್, ಶಾಲೆ ಆಡಳಿತ ಮಂಡಳಿ, ಬಾಲಕರ ವಿರುದ್ಧ ಎಫ್ಐಆರ್




